ಯುವತಿಯ ಬಲಿ ಪಡೆದ ‘ಹಂಪ್ಸ್’: ಮತ್ತೊಬ್ಬಳು ಗಂಭೀರ

ಹಾಸನ: ಬುಲೆಟ್ ಬೈಕ್ ಏರಿ, ಗಾಳಿಯಲ್ಲಿ ತೇಲುತ್ತಾ ಜಾಲಿ ರೈಡ್ ಹೊರಟಿದ್ದ ಆ ಇಬ್ಬರು ಯುವತಿಯರ ಪಾಲಿಗೆ ಆ ರಸ್ತೆಯ ಹಂಪ್ಸ್ ಸಾಕ್ಷಾತ್ ಮೃತ್ಯುವಿನ ರೂಪದಲ್ಲಿ ಎದುರಾದ ಘಟನೆ ಹಾಸನದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಎಂಸಿಎ ಫೈನಲ್ ಇಯರ್ ಓದುತ್ತಿದ್ದ ಪ್ರಿಯಾಳ ಕಣ್ಣಲ್ಲಿ ಭವಿಷ್ಯದ ಕನಸುಗಳಿದ್ದವು. ಹಿಂಬದಿ ಕುಳಿತಿದ್ದ ಸ್ವಾತಿಗೆ ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಆಗಿತ್ತು. ಇಂದು ಈ ಇಬ್ಬರು ಗೆಳತಿಯರು ಹೊರಟಿದ್ದು ಬದುಕಿನ ಖುಷಿ ಹುಡುಕಲು. ಆದರೆ ಕೈಯಲ್ಲಿ ಬುಲೆಟ್ ಇತ್ತು, ತಲೆಯ ಮೇಲೊಂದು ಹೆಲ್ಮೆಟ್ ಇರಲಿಲ್ಲ. ವೇಗವಾಗಿ ಬಂದ ಬೈಕ್ ಆ ಘಾತಕ ಹಂಪ್ಸ್ ಮೇಲೆ ಜಿಗಿದಾಗ, ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಾಳ ಪ್ರಾಣಪಕ್ಷಿ ಅಲ್ಲೇ ಹಾರಿಹೋಗಿತ್ತು. ಅತ್ತ ಸ್ವಾತಿ ಈಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವಿನೊಡನೆ ಸೆಣಸಾಡುತ್ತಿದ್ದಾಳೆ.

ಜೀ ಆ ಒಂದು ಕ್ಷಣದ ಮೈಮರೆವು, ಹೆಲ್ಮೆಟ್ ಧರಿಸದ ಉದಾಸೀನತೆ ಇಂದು ಒಂದು ಮನೆಯ ದೀಪವನ್ನೇ ಆರಿಸಿದೆ. ಪ್ರಿಯಾಳ ಪದವಿ ಮುಗಿಯುವ ಮೊದಲೇ ಆಕೆಯ ಜೀವನದ ಕಥೆ ಮುಗಿದುಹೋಗಿದೆ. ಆ ಹಂಪ್ಸ್ ಹಾಕಿದವರು ಯಾರು? ಆಯ ತಪ್ಪಿದ್ದು ಹೇಗೆ? ಇದೆಲ್ಲವೂ ಈಗ ಕೇವಲ ಪೊಲೀಸ್ ದಾಖಲೆಯ ಸಾಲುಗಳು ಮಾತ್ರ. ಆದರೆ ಹೋದ ಜೀವ ಮರಳಿ ಬರುವುದಿಲ್ಲ!

error: Content is protected !!