ಹಳೆಯಂಗಡಿ: ಪ್ರಪ್ರಥಮ 1979-80, 1988-89 ಮತ್ತು 2015-16 ನೇ ಸಾಲಿನ ಕನಾ೯ಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ), ಶ್ರೀ ವಿದ್ಯಾವಿನಾಯಕ ರಜತಾ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ (ರಿ) ಹಳೆಯಂಗಡಿ ಹಾಗೂ ಕಿಶೋರ – ಕಿಶೋರಿ ಸಂಘ ಹಳೆಯಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಭಾನುವಾರ(ಫೆ.15) ಅಪರಾಹ್ನ 3.30 ಗಂಟೆಗೆ ಸರಿಯಾಗಿ ಮಂಡಲದ ವಠಾರದಲ್ಲಿ ಬೆಂಕಿ-ರಹಿತ ಅಡುಗೆ ಸ್ಪರ್ಧೆ ನಡೆಯಿತು

ಶ್ರೀ ಸುರೇಶ್ ಶೆಣೈ ಇವರು ಸ್ಪರ್ಧೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಪೌಷ್ಠಿಕಾಂಶದ ಅರಿವು ಮತ್ತು ಪಾಕಶಾಲೆಯ ಆಸಕ್ತಿಯನ್ನು ಉತ್ತೇಜಿಸಲು ಇಂತಹ ಸ್ಪರ್ಧೆಯನ್ನು ಆಯೋಜಿಸುವುದು ಉತ್ತಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಯತೀಶ್ ಕೋಟ್ಯಾನ್, ನಾಗೇಶ್ ಟಿ ಜಿ, ಹಿಮಕರ್ , ನಟರಾಜ್ .ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ನಿರ್ಮಿತಾ ಉಪಸ್ಥಿತರಿದ್ದರು.

ಈ ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀ ಸುರೇಶ್ ಶೆಣೈ, ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ , ಶ್ರೀಮತಿ ವಿದ್ಯಾ ಸುಧಾಕರ್ ಸಹಕರಿಸಿದರು.
ಯುವತಿ ಮಂಡಲದ ಕ್ರೀಡಾ ಕಾರ್ಯದರ್ಶಿ ಕುಮಾರಿ ಶ್ವೇತಾ ಸ್ವಾಗತಿಸಿದರು. ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಯುವಕ ಮಂಡಲದ ಜೊತೆ ಕಾರ್ಯದರ್ಶಿ ಶ್ರೀ ಯಶ್ ವಂದಿಸಿದರು.
ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು, ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.