ಮುಂಡ್ಕೂರು-ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ವಿಧಿವಶ

ಕಿನ್ನಿಗೋಳಿ: ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ (60) ಅವರು ಇಂದು ಕಾಸರಗೋಡಿನಲ್ಲಿ ತೀವ್ರ ಹೃದಯಾಘಾತದಿಂದ ಕುಸಿದುಬಿದ್ದು ನಿಧನ ಹೊಂದಿದ್ದಾರೆ.
ಕಾಸರಗೋಡಿನ ಬೇಳೂರು ಐತನಡ್ಕ ಎಂಬಲ್ಲಿ ಉಡುಪಿಯ ಖ್ಯಾತ ವಕೀಲರೊಬ್ಬರ ತರವಾಡು ಮನೆಯಲ್ಲಿ ದೈವ ದರ್ಶನಕ್ಕೆ ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮಧ್ಯಾಹ್ನ  ಸುಮಾರು 2 ಗಂಟೆಯ ವೇಳೆ ಐತನಡ್ಕಕ್ಕೆ ಬಂದಿದ್ದ ಅವರನ್ನು ಮೆರವಣಿಗೆ ಮೂಲಕ ಕರೆದೊಯ್ದಿದ್ದು ದೈವದರ್ಶನ  ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಜಾರಿಗೆಕಟ್ಟೆಯ ಕೊರಗಜ್ಜ-ಕೊರಗರ ಪಂಜುರ್ಲಿ ಕ್ಷೇತ್ರದ ಧರ್ಮದರ್ಶಿಯಾಗಿ ಅವರು ಗುರುತಿಸಿಕೊಂಡಿದ್ದು ಸುತ್ತಮುತ್ತಲಿನ ದೇವಸ್ಥಾನ, ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

error: Content is protected !!