ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು ದಾಖಲೆಗಳ ಪರಿಶೀಲನೆ; ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಗುಡಿಬಂಡೆ: ಬೆಸ್ಕಾಂ ಇಲಾಖೆಯ ಡಿ.ಪಾಳ್ಯ ಶಾಖೆಯ ಜೆ.ಇ. ರಾಘವೇಂದ್ರ ಮತ್ತು ಸಿಬ್ಬಂದಿ ಕಚೇರಿ ವೇಳೆಯಲ್ಲೇ ಡಾಬಾದಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇವರನ್ನು ಅಮಾನತುಪಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆ.ಇ. ರಾಘವೇಂದ್ರ ತಮ್ಮ ಸಿಬ್ಬಂದಿ ಶ್ರೀನಿವಾಸ ಮತ್ತು ಮತ್ತೊರ್ವ ಲೈನ್ ಮೆನ್ ಕಚೇರಿ ವೇಳೆಯಲ್ಲಿ ಮದ್ಯಾಹ್ನದ ಊಟದ ಸಮಯ ಡಾಬಾವೊಂದರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಾ ಕಚೇರಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ವೀಡಿಯೋ ಆರೋಗ್ಯಸ್ವಾಮಿ ಚಿನ್ನಪ್ಪ ಎಂಬವರ ಸಾಮಾಜಿಕ ಜಾಲತಾಣ (ಫೇಸ್‌ಬುಕ್) ದಲ್ಲಿ ಈ ವಿಡಿಯೋ ಹರಿದಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಕರ್ತವ್ಯನಿರತ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಡಾಬಾದಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲನೆ ಮಾಡುವುದಾದರೆ ಇವರಿಗೆ ಇನ್ನು ಕಚೇರಿ ಏಕೆ ಬೇಕು, ಡಾಬಾಗಳನ್ನೇ ಕಚೇರಿಗಳನ್ನಾಗಿ ಮಾಡಿಕೊಳ್ಳಬಹುದಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

error: Content is protected !!