ಮಂಗಳೂರು: ಮಂಗಳೂರು ಸಮೀಪದ ಗಂಜಿಮಠದಲ್ಲಿರುವ ಐತಿಹಾಸಿಕ ಶ್ರೀ ಮೃತ್ಯುಂಜಯೇಶ್ವರ ಕ್ಷೇತ್ರದ ಪುನರುತ್ಥಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 15ರ ಭಾನುವಾರ ಕ್ಷೇತ್ರದ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ವೈಭವದಿಂದ ಜರುಗಲಿದೆ. ಅಯೋಧ್ಯೆಯ ಶ್ರೀರಾಮ ಮಂದಿರದ ಟ್ರಸ್ಟಿಯಾಗಿ ಸಕ್ರಿಯ ಪಾತ್ರ ವಹಿಸಿರುವ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ದೈವಿಕ ಮೆರುಗು ನೀಡಲಿದ್ದಾರೆ.

ಕಾರ್ಯಕ್ರಮದ ವಿವರ:
ಬೆಳಿಗ್ಗೆ 10:00: ದಿವ್ಯ ನಿಧಿ ರೈ ಎರುಂಬು ಮತ್ತು ಬಳಗದವರಿಂದ ‘ಸ್ವರ ಸಮರ್ಪಣೆ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12:10: ವೇದಮೂರ್ತಿ ಶ್ರೀ ಟಿ. ಮುರಳೀಧರ ತಂತ್ರಿ ಬಡಗ ಎಡಪದವು ಅವರ ನೇತೃತ್ವದಲ್ಲಿ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಲಿದೆ.
ಮಧ್ಯಾಹ್ನ 12:30: ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಕಾರಂತ್ ಸುರತ್ಕಲ್ ಅವರ ನೇತೃತ್ವದಲ್ಲಿ ವಿಶಿಷ್ಟವಾದ ಶಿವಾರ್ಚನೆ ಹಾಗೂ ಶಿವಾರಾಧನೆ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1:30: ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ನಂತರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಕ್ಷೇತ್ರದ ಪುನರುತ್ಥಾನದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ಶ್ರೀ ಮೃತ್ಯುಂಜಯೇಶ್ವರ ದೇವರ ಕೃಪೆಗೆ ಪಾತ್ರರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಸಮಿತಿಯು ಪ್ರಕಟಣೆಯಲ್ಲಿ ವಿನಂತಿಸಿದೆ.