
ಮೃಣಾಲ್ ಠಾಕೂರ್ ಹಾಗೂ ಧನುಶ್ ಮದುವೆ ಆಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಹಿಸಿಬಿಸಿ ಸುದ್ದಿ ಕೇಳ ಸಿಗುತ್ತಿತ್ತು. ಆದರೆ ಮೃಣಾಲ್ ಕಡೆಯಿಂದಲೇ ಮದುವೆ ಕುರಿತು ಸ್ಪಷ್ಟನೆ ಸಿಕ್ಕಿದೆ.

‘ಗಲಾಟಾ ಇಂಡಿಯಾ’ಗೆ ಮೃಣಾಲ್ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ, ‘ಫೆಬ್ರವರಿ 14ರಂದು ನಿಮ್ಮ ಮದುವೆ ಎಂಬ ಸುದ್ದಿ ಹರಿದಾಡಿದೆಯಲ್ಲ’ ಎಂದು ಕೇಳಿದ ವೇಳೆ ‘ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಅಲ್ಲ. ನನ್ನ ಮದುವೆ ನಡೆಯೋದು ಏಪ್ರಿಲ್ 1ರಂದು. ಏಕೆಂದರೆ ಅದು ಮೂರ್ಖರ ದಿನ’ ಎಂದು ಅವರು ಉತ್ತರಿಸಿದ್ದಾರೆ.

“ಹೌದು, ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಸರಿಯಾದ ದಿನ, ಸರಿಯಾದ ಸಮಯ ಮತ್ತು ಸರಿಯಾದ ವ್ಯಕ್ತಿ ನನ್ನ ಜೀವನದಲ್ಲಿ ಬಂದಾಗ, ನನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅದನ್ನು ಮೊದಲು ಹೇಳುವವಳು ನಾನೇ” ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 20ರಂದು ಮೃಣಾಲ್ ಠಾಕೂರ್ ನಟನೆಯ ‘ದೋ ದೀವಾನೆ ಶೆಹೆರ್ ಮೇ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಸಿದ್ಧಾಂತ ಚತುರ್ವೇದಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಇಟ್ಟುಕೊಂಡು ಯಾರೂ ವಿವಾಹ ಆಗೋ ಪ್ಲ್ಯಾನ್ ಮಾಡೋದಿಲ್ಲ.