ದ್ವಿತೀಯ ಪಿಯುಸಿ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನ: ರಿಸಲ್ಟ್ ಬಳಿಕ ಮರುಪರಿಶೀಲನೆ ಇಲ್ಲ

ನವದೆಹಲಿ: ಪ್ರಸಕ್ತ ವರ್ಷದಿಂದ ಫಲಿತಾಂಶ ಘೋಷಣೆಯ ನಂತರ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಅಂಕಗಳ ಮರುಪರಿಶೀಲನೆ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಳಿಯು ‘ಆನ್ ಸ್ಕ್ರೀನ್ ಮಾರ್ಕಿಂಗ್’ ಎಂಬ ಡಿಜಿಟಲ್ ಮೌಲ್ಯಮಾಪನ ಮಾದರಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತಿರುವುದರಿಂದ ಈ ಬದಲಾವಣೆಯಾಗಿದೆ.

ಆದಾಗ್ಯೂ, 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮೊದಲಿನಂತೆ ಭೌತಿಕವಾಗಿಯೇ ಮುಂದುವರಿಯಲಿದೆ. ಹಳೆಯ ವ್ಯವಸ್ಥೆಯಡಿ, ಅಂಕಗಳ ಮೊತ್ತದಲ್ಲಿನ ವ್ಯತ್ಯಾಸ ಅಥವಾ ಯಾವುದಾದರೂ ಅಂಕಗಳು ಬಿಟ್ಟುಹೋಗಿವೆಯೇ ಎಂದು ಪರಿಶೀಲಿಸಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರು. ಹೊಸ ಡಿಜಿಟಲ್ ಮೌಲ್ಯಮಾಪನ ಕ್ರಮದಲ್ಲಿ ಇಂತಹ ಲೋಪದೋಷಗಳನ್ನು ಆರಂಭದಲ್ಲೇ ನಿವಾರಿಸಲಾಗುತ್ತದೆ.

error: Content is protected !!