ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಸಂಚಕಾರ! ಬಿಜೆಪಿ ಸಂಸದನ ನೋಟಿಸ್‌ನಲ್ಲಿ ಏನಿದೆ?

ನವದೆಹಲಿ: ಬುಧವಾರವಷ್ಟೇ ಕೇಂದ್ರದ ಬಜೆಟ್ ಮತ್ತು ಅಮೆರಿಕದ ಒಪ್ಪಂದವನ್ನು ಟೀಕಿಸಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಅವರ ಕುತ್ತಿಗೆಗೆ ಬಿಜೆಪಿಯ ನಿಶಿಕಾಂತ್ ದುಬೆ ಎಂಬ ‘ಅಸ್ತ್ರ’ ಈಗ ನೇತಾಡುತ್ತಿದೆ.

ನಿಶಿಕಾಂತ್ ದುಬೆ ಸುಮ್ಮನೆ ನೋಟಿಸ್ ಕೊಟ್ಟಿಲ್ಲ. ಅದರ ಹಿಂದೆ ಇರೋದು ಭಯಾನಕ ಆರೋಪಗಳ ಪಟ್ಟಿ. ರಾಹುಲ್ ಗಾಂಧಿ ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯಾ ಅಂತ ದೇಶ ವಿದೇಶ ಸುತ್ತೋದು ಬರೀ ಪ್ರವಾಸಕ್ಕಲ್ಲ; ಅದರ ಹಿಂದೆ ಸೊರೊಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್‌ನಂತಹ ಭಾರತ ವಿರೋಧಿ ಪಡೆಗಳ ನಂಟಿದೆ ಅನ್ನೋದು ದುಬೆ ವಾದ. ಸಮಾಜದ ಶಾಂತಿ ಕದಡಲು ವಿದೇಶಿ ಶಕ್ತಿಗಳೊಂದಿಗೆ ರಾಹುಲ್ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಈ ‘ಸಬ್ಸ್ಟಾಂಟಿವ್ ಮೋಷನ್’ ಈಗ ಸಂಸತ್ತನ್ನೇ ನಡುಗಿಸುತ್ತಿದೆ.

ಜೀವಿತಾವಧಿ ನಿಷೇಧದ ಸ್ಕೆಚ್!
ಬಿಜೆಪಿ ಸಂಸದನ ಈ ನೋಟಿಸ್‌ನ ಅಸಲಿ ಉದ್ದೇಶ ರಾಹುಲ್ ಸಂಸದ ಸ್ಥಾನ ಕಿತ್ತುಕೊಳ್ಳುವುದು ಮಾತ್ರವಲ್ಲ, ಬದಲಿಗೆ ಅವರನ್ನ ಜೀವಿತಾವಧಿಗೆ ಚುನಾವಣಾ ಕಣದಿಂದಲೇ ಅಳಿಸಿ ಹಾಕೋದು! ಇದು ಬರೀ ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ, ಇದು ಅಧಿಕೃತ ‘ಸದಸ್ಯತ್ವ ರದ್ದತಿ’ಯ ಮಸಲತ್ತು. ರಾಹುಲ್ ಆಡಿದ ಮಾತುಗಳು ದೇಶಕ್ಕೆ ಮುಳ್ಳಾಗುತ್ತಿವೆಯೇ ಅಥವಾ ಬಿಜೆಪಿ ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆಯೇ? ಉತ್ತರ ದೆಹಲಿಯ ಈ ರಾಜಕೀಯ ಮಸಲತ್ತಿನಲ್ಲೇ ಅಡಗಿದೆ.

ಮತ್ತೆ ರಾಹುಲ್ ಗಾಂಧಿ ಮನೆಯ ಹಾದಿ ಹಿಡೀತಾರಾ? ಅಥವಾ ಈ ‘ನಿಲುವಳಿ’ ಅಸ್ತ್ರವನ್ನೇ ಮೆಟ್ಟಿ ನಿಂತು ಸಂಸತ್ತಿನಲ್ಲಿ ಘರ್ಜಿಸ್ತಾರಾ? ದೆಹಲಿಯ ಈ ರಣರಂಗದಲ್ಲಿ ಆಟ ಈಗಷ್ಟೇ ಶುರುವಾಗಿದೆ!

error: Content is protected !!