ಬೆಳ್ತಂಗಡಿ: ಅದು ಬೆಳ್ತಂಗಡಿಯ ಕಾಶಿಬೆಟ್ಟು. ಅಕ್ಷರ ಕಲಿಯಲು ಹೋಗಬೇಕಿದ್ದ ಹುಡುಗಿ ನಾಟಕವಾಡಿ ಸಿಕ್ಕಿಬಿದ್ದಿದ್ದಾಳೆ. ಕಾರಿನಲ್ಲಿ ಬಂದ ಮುಸುಕುಧಾರಿಗಳು… ಕೈ ಮೇಲೆ ಚೂರಿಯಿಂದ ಹಲ್ಲೆ… ಜಸ್ಟ್ ಮಿಸ್ಸಲ್ಲಿ ಎಸ್ಕೇಪ್… ಈ ಕಥೆ ಕೇಳುತ್ತಿದ್ದರೆ ಯಾವುದೋ ಬಾಲಿವುಡ್ ಸಿನಿಮಾ ನೋಡಿದಂತಿತ್ತು. ಇಡೀ ಊರೇ ಬೆಚ್ಚಿಬಿದ್ದಿತ್ತು, ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಓಡೋಡಿ ಬಂದಿದ್ದರು. ಪೊಲೀಸರು ಹಗಲು ರಾತ್ರಿ ಸಿಸಿಟಿವಿ ಜಾಲಾಡಿದ್ದರು. ಆದರೆ ಅಸಲಿ ಸತ್ಯ ಹೊರಬಂದಾಗ ಖಾಕಿ ಪಡೆ ದಂಗಾಗಿ ಹೋಗಿದೆ!

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಈ ʻಪೋರಿ’ಗೆ ಹಳ್ಳಿಯ ಕಾಲೇಜಿನಲ್ಲಿ ಓದಲು ಮನಸ್ಸಿಲ್ಲ. ಅವಳಿಗೆ ಬೇಕಾಗಿದ್ದು ಮಂಗಳೂರು ನಗರದ ಕಾಲೇಜು. ಮನೆಯಲ್ಲಿ ಕೇಳಿದರೆ ಪೋಷಕರು ಒಪ್ಪುವುದಿಲ್ಲ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಈಕೆ ಒಂದು ಮಾಸ್ಟರ್ ಸ್ಕೆಚ್ ಹಾಕಿದಳು. ಕೈ ಮೇಲೆ ತಾನೇ ಬ್ಲೇಡ್ ನಿಂದ ಗೀಚಿಕೊಂಡಳು, ಅತ್ತ ಮನೆಯ ಪಕ್ಕದಲ್ಲೇ ತನ್ನ ಪುಸ್ತಕಗಳಿಗೆ ಅಗ್ನಿ ಸಂಸ್ಕಾರ ಮಾಡಿ, ಬ್ಯಾಗ್ ಕಿಡ್ನಾಪರ್ ಗಳ ಪಾಲಾಯ್ತು ಅಂತ ಕಣ್ಣೀರು ಹಾಕಿದಳು ಎನ್ನುವುದು ಮೂಲಗಳಿಂದ ಸಿಕ್ಕ ಮಾಹಿತಿ.

ಪೊಲೀಸ್ ಇಂಟ್ರೋಗೇಶನ್‌ನಲ್ಲಿ ‘ಬಣ್ಣ’ ಬಯಲು!
ಪೊಲೀಸರು ಸುಮ್ಮನೆ ಬಿಡ್ತಾರಾ? ಅವರ ತನಿಖೆಯ ಮುಂದೆ ಸುಳ್ಳು ಎಷ್ಟು ದಿನ ತಾನೆ ಉಳಿಯಲು ಸಾಧ್ಯ? “ಕಾರಿನ ಬಣ್ಣ ಯಾವುದು?”, “ಕಿಡ್ನಾಪರ್ಸ್ ಮುಖ ಹೇಗಿತ್ತು?”, “ಎಕ್ಸಾಕ್ಟ್ ಆಗಿ ಎಲ್ಲಿ ಆಯ್ತು?” ಅಂತ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನಿಸಿದಾಗ ಈಕೆ ತಬ್ಬಿಬ್ಬು ಆಗಿದ್ದಾಳೆ. ಕಡೆಗೆ ಬಾಯಿ ಬಿಟ್ಟಿದ್ದಾಳೆ— “ಸರ್, ಸಿಟಿಯ ಕಾಲೇಜಿಗೆ ಹೋಗೋಕೆ ಇದೆಲ್ಲಾ ಮಾಡಿದೆ” ಅಂತ!
ಅಲ್ಲಾ ಹುಡುಗಿ, ಕಾಲೇಜು ಚೇಂಜ್ ಮಾಡೋಕೆ ಈ ರೇಂಜ್ ಕಿಡ್ನಾಪ್ ಕಥೆ ಬೇಕಿತ್ತಾ? ನಿನ್ನ ಒಂದು ಸಣ್ಣ ನಾಟಕಕ್ಕೆ ಇಡೀ ಬೆಳ್ತಂಗಡಿಯೇ ಬೆದರಿ ಹೋಗಿತ್ತು. ಪೊಲೀಸರ ಸಮಯ, ಜನರ ಆತಂಕ ಎಲ್ಲವೂ ನಿನ್ನ ಈ ‘ಬ್ಲೇಡ್’ ನಾಟಕದಲ್ಲಿ ವ್ಯರ್ಥವಾಯ್ತು.
ಸದ್ಯಕ್ಕೆ ಈ ಕಿಡ್ನಾಪ್ ಪ್ರಹಸನ ಸುಖಾಂತ್ಯ ಕಂಡಿದೆ. ಹುಡುಗಿಗೆ ಆಪ್ತಸಮಾಲೋಚನೆ ನಡೆಸಿ, ಆಕೆ ತಪ್ಪಿತಸ್ಥಳೆಂಬ ಅಪರಾಧಿ ಭಾವ ಮೂಡಿಸದಂತೆ, ಆಕೆಯ ಬೇಕು ಬೇಡಗಳನ್ನು ಪೂರೈಸಿ ಮುಂದೆ ಈಕೆ ಈ ರೀತಿ ನಾಟಕವಾಡದಂತೆ ಜವಾಬ್ದಾರಿಯಿಂದ ವರ್ತಿಸುವಂತೆ ಮಾಡುವುದು ಸದ್ಯದ ಅಗತ್ಯವಾಗಿದೆ.
