
ಮುಂಬೈ: ವಸತಿ ಕಟ್ಟಡದ ಲಿಫ್ಟ್ ಒಳಗೆ ಹೈಡ್ರೋಜನ್ ತುಂಬಿದ ಬಲೂನ್ಗಳು ಸ್ಫೋಟಗೊಂಡಿರುವ ವಿಡಿಯೋ ವೈರಲ್ ಆಗಿದೆ.

ಓರ್ವ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಬಲೂನ್‌ಗಳನ್ನು ಹೊತ್ತುಕೊಂಡು ಲಿಫ್ಟ್ ಒಳಗೆ ಬಂದಿದ್ದಾನೆ ಮತ್ತೋರ್ವ ಟ್ರಾಲಿ ಬ್ಯಾಗ್ ಹೊತ್ತು ಬಂದಿದ್ದ. ಲಿಫ್ಟ್ ಬಾಗಿಲು ಹಾಕುತ್ತಿದ್ದಂತೆಯೇ ಬಲೂನ್ಗಳು ಸ್ಫೋಟಗೊಂಡಿದ್ದು, ಬೆಂಕಿ ಇಡೀ ಲಿಫ್ಟ್ ಒಳಗೆ ಹರಡಿತ್ತು. ಎಲ್ಲರೂ ಲಿಫ್ಟ್ನಿಂದ ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
