BREAKING NEWS!! ನಂತೂರು: ಭೀಕರ ಅಪಘಾತ, ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿ ದಾರುಣ ಬಲಿ!

ಮಂಗಳೂರು: ಸಿಟಿಬಸ್ಸಿನ ನಾಗಾಲೋಟಕ್ಕೆ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಸಂಚರಿಸುತ್ತಿದ್ದ ಯುವತಿ ದಾರುಣ ಬಲಿಯಾದ ಘಟನೆ ಇಂದು ರಾತ್ರಿ 7:45ರ ಸುಮಾರಿಗೆ ಸಂಭವಿಸಿದೆ. ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ(25) ಮೃತಪಟ್ಟವರು.


ಘಟನೆಯ ವಿವರ:
ಹುಟ್ಟುಹಬ್ಬದ ಕಾರ್ಯಕ್ರಮ ನಿಮಿತ್ತ ದೀಪ್ತಿ ತಮ್ಮ ಸ್ನೇಹಿತರೊಬ್ಬರ ಜೊತೆಯಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ನಂತೂರ್ ಬಳಿ 22 ನಂಬ್ರ ಸಿಟಿಬಸ್ ಡಿಕ್ಕಿಯಾಗಿದೆ. ಇದರಿಂದ ದೀಪ್ತಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕದ್ರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!