ಗಂಡನನ್ನು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ; ವೀಡಿಯೋ ವೈರಲ್!

ಮಧ್ಯಪ್ರದೇಶ: ಮಹಿಳೆಯೊಬ್ಬರು ತಮ್ಮ ಪತಿಯನ್ನು ಹಾಸಿಗೆಯ ಮೇಲೆ ತಳ್ಳಿ, ಆತನ ಮೇಲೆ ಕುಳಿತು ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸತ್ನಾದ ವ್ಯಕ್ತಿಯೊಬ್ಬ ಪತ್ನಿಯ ಕಿರುಕುಳವನ್ನು ಸಾಬೀತುಪಡಿಸಲು ತನ್ನ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದು, ಆ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಮಹಿಳೆಯು ಪತಿಯ ಮೇಲೆ ಕುಳಿತು ಎರಡೂ ಕೈಗಳಿಂದ ಆತನ ಕೆನ್ನೆಗೆ ಹಿಗ್ಗಾಮುಗ್ಗಾ ಹೊಡೆಯುವುದು ಕಂಡುಬಂದಿದೆ.

ಆ ವೇಳೆ ಆತನ ಸಹಾಯಕ್ಕೆ ಯಾರೂ ಬಂದಿಲ್ಲ. ಓರ್ವ ಮಹಿಳೆ ಮೊದಲಿಗೆ ಆಕೆಯನ್ನು ಬಿಡಿಸಲು ಮುಂದಾದರು. ಆಕೆಯ ಉಗ್ರ ಸ್ವರೂಪವನ್ನು ಕಂಡು ಅಲ್ಲಿಂದ ಸೀದಾ ಹೋಗಿದ್ದಾರೆ. ನಂತರ ಪುರುಷ ಮಗುವನ್ನು ಎತ್ತಿಕೊಂಡು ಬಂದಿದ್ದು, ಅವರು ಸಹ ಮೂಕ ಪ್ರೇಕ್ಷಕನಂತೆ ನೋಡಿದ್ದಾರೆ.

ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ.

error: Content is protected !!