
ಲಕ್ನೋ: ಬಾಲಕಿಯನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ಗೂಳಿಯಿಂದ, ಬಾಲಕಿಯನ್ನು ರಕ್ಷಿಸಲು ಸ್ಥಳೀಯರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ, ಕೊನೆಗೆ ವ್ಯಕ್ತಿಯೊಬ್ಬ ಗೂಳಿಗೆ ತನ್ನ ಕೈಯಲ್ಲಿದ್ದ ಟವೆಲ್ ಬೀಸುವ ಮೂಲಕ ಬೇರೆಡೆಗೆ ಗಮನ ಸೆಳೆದು ಆಕೆಯನ್ನು ಉಳಿಸಿಕೊಂಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಈ ಘಟನೆ ಲಕ್ನೋದ ಚೌಪಟ್ಟಿಯಲ್ಲಿ ನಡೆದಿದೆ.