
ವಿರಾರ್: ಯಾಕೆ ಹಣ್ಣಿಗೆ ಚರಂಡಿ ನೀರು ಸಿಂಪಡಣೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಹಣ್ಣಿನ ವ್ಯಾಪಾರಿಯೊಬ್ಬ ಗಟ ಗಟನೆ ಚರಂಡಿ ನೀರು ಕುಡಿದಿರುವ ಘಟನೆ ಮಹಾರಾಷ್ಟ್ರದ ವಿರಾರ್ನಲ್ಲಿ ನಡೆದಿದೆ. ನಂತರ ಸ್ಥಳೀಯರು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಪುರುಷರ ಗುಂಪೊಂದು ಹಣ್ಣಿನ ಮಾರಾಟಗಾರನಿಗೆ ಹಣ್ಣುಗಳ ಮೇಲೆ ಸಿಂಪಡಿಸುತ್ತಿದ್ದ ನೀರು ಗಟರ್ ನೀರು ಆದರೆ ಅವನು ಆ ನೀರು ಬಿಎಂಸಿ ನೀರು ಎಂದು ವಾದಿಸುತ್ತಿದ್ದ. ಬಿಎಂಸಿ ನೀರು ಎಲ್ಲಿದೆ ಎಂದು ಕೇಳಿದಾಗ, ಕ್ಯಾಮೆರಾದಲ್ಲಿ ಕೊಳಕು ನೀರನ್ನು ತೋರಿಸಿದ್ದಷ್ಟೇ ಅಲ್ಲದೆ ಅದೇ ನೀರನ್ನು ಕುಡಿದಿದ್ದಾನೆ.

ಆ ವ್ಯಕ್ತಿ ಹಣ್ಣುಗಳನ್ನು ತೂಕ ಮಾಡಲು ಬಳಸುವ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಗುಂಪಿನ ಮುಂದೆ ಕುಡಿಯುತ್ತಾನೆ. ಮಾರಾಟಗಾರನು ಹಣ್ಣುಗಳ ಮೇಲೆ ನೀರನ್ನು ಸಿಂಪಡಿಸಿದ್ದಾಗಿ ಒಪ್ಪಿಕೊಂಡು, ತಾನೂ ಅದನ್ನು ಕುಡಿದಿದ್ದೇನೆ ಎಂದು ಹೇಳುವ ಮೂಲಕ ಅದನ್ನು ಸಮರ್ಥಿಸಿಕೊಳ್ಳುತ್ತಾನೆ.