ಮಂಗಳೂರು: ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ವಾದಿರಾಜ ಜಯಂತಿ ಕಾರ್ಯಕ್ರಮ ಶುಕ್ರವಾರ ಸಂಜೆ ಪ್ರತಿಷ್ಠಾನದ ಹಾಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ವಾದಿರಾಜರಿಗೆ ದೀಪಾರ್ಚನೆಗೈದು ಕೀರ್ತನೆಯನ್ನು ಹಾಡುವ ಮೂಲಕ ಉದ್ಘಾಟಿಸಲಾಯಿತು.

ಬಳಿಕ ಮಾತಾಡಿದ ನಿತ್ಯಾನಂದ ಕಾರಂತ್ ಅವರು, “ವಾದಿರಾಜರ ಸ್ಮರಣೆಯನ್ನು ಇಂದಿನ ಪೀಳಿಗೆಯ ಮಕ್ಕಳಿಗೂ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮ ಶ್ಲಾಘನೀಯ. ಪ್ರದೀಪ್ ಕುಮಾರ್ ಕಲ್ಕೂರ ಅವರು ಈ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ವಾದಿರಾಜರ ಕೀರ್ತನೆಗಳು ಜನರನ್ನು ಇಂದಿಗೂ ಮುಂದಿಗೂ ತಲುಪಲಿ” ಎಂದರು.

ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲಕೃಷ್ಣ ವರ್ಣ, ಹರಿಕಥಾ ಪರಿಷತ್ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.