ಬಿಎಂಟಿಸಿ ಬಸ್​ಗೆ ರೈಲು ಡಿಕ್ಕಿ!

ಬೆಂಗಳೂರು: ಬಿಎಂಟಿಸಿ ಬಸ್​​​ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಇಂದು (ಜ.26) ಬೆಳಗ್ಗೆ ಬೆಂಗಳೂರಿನ ಸಾದರಮಂಗಲ ಬಳಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾದರಮಂಗಲ ಡಿಪೋ 51ರ KA57 F6000 ನಂಬರ್​ನ ಬಸ್​ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ರೈಲ್ವೆ ಪ್ಯಾರ್ಲಲ್ ರೋಡ್​ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಏಕಾಏಕಿ ರೈಲು ಬಂದು ಗುದ್ದಿದ್ದು, ಸದ್ಯ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ.

ಪರಿಣಾಮ ಬಸ್​ ಹಿಂಭಾಗ ಜಖಂ ಗೊಂಡಿದೆ.

error: Content is protected !!