
ಪಿರಿಯಾಪಟ್ಟಣ: ತಾಲೂಕಿನ ಹೆಚ್ ಮಠದ ಕೊಪ್ಪು ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು(ಜ.26) ಬೆಳಕಿಗೆ ಬಂದಿದೆ.

ಕೊಪ್ಪು ಗ್ರಾಮದ ನಿವಾಸಿ ಮಹದೇವ ಎಂಬವರ ಪತ್ನಿ ಹೇಮಲತಾ (38), ಮಗಳು ಅನು (15) ಹಾಗೂ ಮಗ ಚೇತನ್ (13) ಮೃತಪಟ್ಟವರು.
ಈ ಮೂವರು ಮನೆಯ ತಂಬಾಕು ಬ್ಯಾರನ್ ಪೋಲ್‍ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ಕೌಟುಂಬಿಕ ಕಲಹದಿಂದಾಗಿ ತಾಯಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, ಆದರೆ ಸಾವಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.