
ಉಡುಪಿ: ಸ್ನೇಹಿತರೊಂದಿಗೆ ಮಲ್ಪೆ ಬೀಚ್‌ಗೆ ಹೋಗಿ ಮರಳುತ್ತಿದ್ದಾಗ, ಸಿಗ್ನಲ್ ಬೀಳುತ್ತಿದ್ದಂತೆ ವೇಗವಾಗಿ ಸ್ಕೂಟರ್ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಟ್ರಕ್ ಟಯರ್ ಅಡಿಗೆ ಸಿಲುಕಿ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ನಡೆದಿದೆ.

ಮಣಿಪಾಲ ಎಂಐಟಿ ಕ್ವಾರ್ಟಸ್ ನಿವಾಸಿ ಅವಿನಾಶ್ (19) ಮೃತ ಯುವಕ.

ಸ್ಕೂಟರ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಈ ಸಾವಿಗೆ ಕಾರಣ ಎನ್ನಲಾಗಿದ್ದು, ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.