ಮಂಗಳೂರು: ಸೆಂಟ್ರಲ್ ವೇರ್‌ಹೌಸ್ ರಸ್ತೆ, ಮಣ್ಣಗುಡ್ಡದಲ್ಲಿರುವ ‘ಎಂ. ಸಂಜೀವ ಶೆಟ್ಟಿ – ಸಿಲ್ಕ್ಸ್ ಅಂಡ್ ರೆಡಿಮೇಡ್’ ಸಂಸ್ಥೆಯ ಹೊಸದಾಗಿ ನಿರ್ಮಾಣಗೊಂಡ ಕುಟುಂಬ ಪ್ರದರ್ಶನ ಮಳಿಗೆಯ ಭವ್ಯ ಉದ್ಘಾಟನೆ ಜನವರಿ 25ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರಾದ ಮುರಳೀಧರ ಎಂ. ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ರೇಷ್ಮೆ ಉಡುಪುಗಳು ಹಾಗೂ ಆಧುನಿಕ ರೆಡಿಮೇಡ್ ವಸ್ತ್ರಗಳ ವಿಶಾಲ ಸಂಗ್ರಹವನ್ನು ಈ ಮಳಿಗೆ ಒಳಗೊಂಡಿದ್ದು, ಗ್ರಾಹಕರಿಗೆ ಗುಣಮಟ್ಟದ ವಸ್ತ್ರಗಳನ್ನು ಒಂದೇ ಅಡಿಯಲ್ಲಿ ಒದಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಕುಟುಂಬ ಸಮೇತರಾಗಿ ಆಗಮಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ಆಕರ್ಷಕ ವಿನ್ಯಾಸ ಹಾಗೂ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಮಳಿಗೆಯನ್ನು ರೂಪಿಸಲಾಗಿದೆ ಎಂದರು.

ಎಂ.ಜಿ.ರೋಡ್‌ನಲ್ಲಿ ಈಗಾಗಲೇ ಸಂಸ್ಥೆಯ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ಅದರ ಸಮೀಪದ ಸುಮಾರು 400 ಮೀಟರ್ ದೂರದಲ್ಲಿ ವಿಸ್ತಾರ ಮತ್ತು ಆಧುನಿಕತೆಯ ಅನುಕೂಲಕ್ಕಾಗಿ ಈ ಹೊಸ ಮಳಿಗೆಯನ್ನು ಆರಂಭಿಸಲಾಗುತ್ತಿದೆ. ಗ್ರಾಹಕರ ಪ್ರೀತಿ, ನಂಬಿಕೆ ಹಾಗೂ ಆಶೀರ್ವಾದದಿಂದ ಸಣ್ಣ ಹೆಜ್ಜೆಯೊಂದಿಗೆ ಸಂಸ್ಥೆ ಇಲ್ಲಿಯವರೆಗೆ ಬೆಳೆದಿದೆ. ಮುಂದಿನ ದಿನಗಳಲ್ಲಿ ಗ್ರಾಹಕ ಸ್ನೇಹಿ ಸೇವೆ, ಭಾವನಾತ್ಮಕ ನಿಷ್ಠೆ ಮತ್ತು ಪ್ರಾಮಾಣಿಕತೆಯೊಂದಿಗೆ ವ್ಯವಹಾರದ ವಿಸ್ತರಣೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ವಿನಮ್ರವಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿಲ್ ಶೆಟ್ಟಿ, ಐದು ಮಳಿಗೆಗಳನ್ನು ಒಳಗೊಂಡ ಹೊಸ ಕಟ್ಟಡದಲ್ಲಿ ಪ್ರತ್ಯೇಕ ಡಿವಿಷನ್‌ಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದ್ದು, ಕುಟುಂಬದ ಎಲ್ಲ ಸದಸ್ಯರಿಗೆ ಹೊಂದುವ ಉಡುಪುಗಳು ಲಭ್ಯವಿವೆ. ಪ್ರತಿಯೊಬ್ಬರ ಬಜೆಟ್‌ಗೆ ಅನುಗುಣವಾಗಿ 500 ರೂ.ಗಳಿಂದ ಆರಂಭವಾಗುವ ಉಡುಪುಗಳು ದೊರೆಯಲಿವೆ ಎಂದು ಹೇಳಿದರು.

ಸಿಲ್ಕ್ ಡಿವಿಷನ್‌ನ ಪ್ರಮುಖರಾದ ಅಶ್ವಿತಾ ಶೆಟ್ಟಿ ಮಾತನಾಡಿ, ರೇಷ್ಮೆ ಸೀರೆಯ ವೈಶಿಷ್ಟ್ಯತೆಗಳ ಕುರಿತು ವಿವರಿಸಿದರು. ಮಹಿಳೆಯರು, ಪುರುಷರು ಹಾಗೂ ಎಲ್ಲಾ ವಯೋಮಾನದ ಮಕ್ಕಳಿಗೆ ಸೂಕ್ತವಾಗುವಂತೆ ವಿವಿಧ ವಿನ್ಯಾಸದ ರೇಷ್ಮೆ ಸೀರೆಗಳು, ಮೆನ್ಸ್ ಕುರ್ತಾ, ಶೆರ್ವಾಣಿ ಸೇರಿದಂತೆ ವೈವಿಧ್ಯಮಯ ಉಡುಪುಗಳ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ಕಾರ್ಯನಿರ್ವಹಣಾ ಅಧಿಕಾರಿ ಮಹೀಂದ್ರಾ ಉಪಸ್ಥಿತರಿದ್ದರು.
