ಫೆ.14-15: ಮಂಗಳೂರಿನಲ್ಲಿ ‌ಜಯವಿಜಯ ಜೋಡುಕರೆ ಕಂಬಳದ ವೈಭವ

ಮಂಗಳೂರು: ಜಯವಿಜಯ ಜೋಡುಕರೆ ಕಂಬಳ ಸಮಿತಿ ಜಪ್ಪಿನಮೊಗರು(ರಿ)- ಮಂಗಳೂರು ವತಿಯಿಂದ ಫೆ.14ರಿಂದ 15ರವರೆಗೆ ಜಪ್ಪಿನಮೊಗರಿನ ನೇತ್ರಾವತಿ ನದಿ ತೀರದಲ್ಲಿ ಹೊನಲು-ಬೆಳಕಿನ ಕಂಬಳ ಅದ್ಧೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರಿನ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಪ್ರಾಚೀನ ಕ್ರೀಡೆ ನಶಿಸಿ ಹೋಗಬಾರದು, ಅದನ್ನು ಉಳಿಸಬೇಕು ಎಂಬ ವಿಶೇಷ ಚಿಂತನೆ ಮಾಡಿ ಕೀರ್ತಿಶೇಷ ಜಪ್ಪಿನಮೊಗರು ವೈದ್ಯನಾಥ ದೈವಸ್ಥಾನ ಆಡಳಿತ ಮೊಕ್ತೇಸರ ಆಗಿದ್ದ ಜಯಗಂಗಾಧರ ಶೆಟ್ಟಿ ಈ ಕಂಬಳಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಕಳೆದ 15 ವರ್ಷಗಳಿಂದ ಕಂಬಳ ಯಶಸ್ವಿಯಾಗಿದ್ದು ಇದೀಗ 16ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಕಂಬಳವನ್ನು ಅನಿಲ್‌ ಶೆಟ್ಟಿ ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ. ಅಪಾರ ಮಂದಿ ಕಂಬಳ ಸಮಿತಿಗೆ ಜೋಡಣೆಯಾಗಬೇಕಿದ್ದು, ಕಂಬಳ ಯಶಸ್ವಿಯಾಗಿ ನಡೆಯಬೇಕಿದೆ ಎಂದು ವಿವರಿಸಿದರು.

ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಗಣೇಶ್‌ ರಾವ್‌ ಅಧ್ಯಕ್ಷತೆ ವಹಿಸಿದ್ದಾರೆ. ಅನಂತ ಪದ್ಮನಾಭ ಅಸ್ರಣ್ಣ ಆಶೀರ್ವಚನ, ಬ್ರಹ್ಮಶ್ರೀ ವಿಠಲ ದಾಸ ತಂತ್ರಿ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಕೋಣದ , ಆರೈಕೆ ಇನ್ನಿತರ ವ್ಯವಸ್ಥೆ ಮಾಡುವವರಿಗೆ ಕಂಬಳ ಸಮಿತಿಯಿಂದ ಸ್ವಾಗತ ಕೋರುವುದಲ್ಲದೆ ಅವರಿಂದ ಪೂರ್ಣ ಸಹಕಾರ ಯಾಚಿಸುತ್ತೇನೆ. ಕಂಬಳ ಯಶಸ್ವಿಗೆ ನಡೆಸುವ ಜವಾಬ್ದಾರಿ ಇದೆ. ಕೋಣಗಳನ್ನು ಸಾಕಿ ಸಲಹಲು ಜವಾಬ್ದಾರಿ, ಸಾಕಷ್ಟು ವೆಚ್ಚ ಇದೆ ಅವರನ್ನು ಸೂಕ್ತವಾಗಿ ಗೌರವಿಸಲಾಗುವುದು ಎಂದರು. ವಿಶೇಷವಾಗಿ ಸುಚೇತ್‌ ಎಂಟರ್‌ಪ್ರೈಸಸ್‌ ಮುಂಬೈ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್‌ ಶೆಟ್ಟಿ ಕಂಬಳಕ್ಕೆ ಪೂರ್ಣ ಜೋಡಿಸಿಕೊಂಡಿದ್ದಾರೆ. ಹಿರಿಯರು ಕೊಡುಗೆ ಕೊಟ್ಟ ಎಲ್ಲರ ಸಹಕಾರ ದೊರಕಿದೆ. ಗೆದ್ದವರಿಗೆ ಚಿನ್ನದಪದಕ ವಿಶೇಷ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಮಂಗಳೂರಿನಲ್ಲಿ ‌ ಫ್ಲೆಕ್ಸ್, ಬ್ಯಾನರ್‌ ಅಳವಡಿಸಲು ಅವಕಾಶ ಇಲ್ಲದಿರುವುದರಿಂದ ಕಂಬಳದ ಬಗ್ಗೆ ಜನರಿಗೆ ಮಾಹಿತಿ ಸಿಗುವುದು ಕಡಿಮೆಯಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಕಂಬಳ ಇದ್ದರೆ ಸಹಜವಾಗಿ ಗೊತ್ತಾಗುತ್ತದೆ. ಆದರೆ ನಗರದಲ್ಲಿ ನಡೆಯುವ ಕಂಬಳದ ಮಾಹಿತಿ ಮಾಧ್ಯಮಗಳ ಮುಖಾಂತರವೇ ಹೋಗಬೇಕು. ನಗರಕ್ಕೆ ತುಂಬಾ ಕಡೆಯಿಂದ ಜನರು ಬರುತ್ತಾರೆ. ಅವರಿಗೆ ಎಲ್ಲಿ ಕಂಬಳ ನಡೆಯುತ್ತಿದೆ ಎನ್ನುವುದು ಅರಿವಾಗುವುದಿಲ್ಲ. ಕಂಬಳ ತುಳುನಾಡಿನ ಸಂಸ್ಕೃತಿ ಆಗಿರುವುದರಿಂದ ಹತ್ತು ಕಡೆಗಳಲ್ಲಿ ಫ್ಲೆಕ್ಸ್‌ ಬ್ಯಾನರ್‌ ಅವಳವಡಿಸಲು ಜಿಲ್ಲಾಧಿಕಾರಿಗೆ ಅನುಮತಿ ಕೋರಿದ್ದೇವೆ ಅದಕ್ಕೆ ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಜಾತ್ರೆ, ರಥೋತ್ಸವ ಈ ರೀತಿಯ ಧರ್ಮಿಕ ಕಾರ್ಯಕ್ರಮಗಳಿಗೆ ಫ್ಲೆಕ್ಸ್‌ ಬಾನ್ಯರ್‌ ಅಳವಡಿಸಲು ಜಾಗ ನಿಗದಿ ಮಾಡಲು ಮನವಿ ಮಾಡಲಾಗುವುದು ಎಂದರು.

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಜೆ. ಅನಿಲ್ ಶೆಟ್ಟಿ ಮನ್ಕುತೋಟ, ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ. ಉಮೇಶ್ ಅತಿಕಾರಿ, ಜೆ. ಬಾಲಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ,   ಚಿತ್ತರಂಜನ್ ಬೋಳಾರ್, ರಾಕೇಶ್ ರೈ, ಗಣೇಶ್ ಶೆಟ್ಟಿ, ಭುಜಂಗ ಶೆಟ್ಟಿ, ರಾಜೇಶ್ ಶೆಟ್ಟಿ, ಆರಾಧ್ಯ, ಸುರೇಶ್ ಶೆಟ್ಟಿ ಕೊಳಂಬೆ, ಪ್ರವೀಣ್ ಚಂದ್ರ ಆಳ್ವ,    ವೀಣಾ ಮಂಗಳ ಮತ್ತಿತರರು ಉಪಸ್ಥಿತರಿದ್ದರು.

error: Content is protected !!