ಉಡುಪಿ: ಮೂಡುಬೆಳ್ಳೆ ಸಮೀಪದ ಕನರಾಡಿಯಲ್ಲಿ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಮೆಂಡೋನ್ಸಾ ಬಂಧಿತ ಆರೋಪಿಗಳು. ವನಜ ಪೂಜಾರಿ ಕೊಲೆಯಾದ ಮಹಿಳೆ.

ಸೋಮವಾರ ರಾತ್ರಿ 8.30ರ ಸುಮಾರಿಗೆ ವಲೇರಿಯನ್ ಮೆಂಡೋನ್ಸಾ ಅವರ ಮನೆಯಲ್ಲಿ ಮಹಿಳೆ ವನಜ ಪೂಜಾರಿ, ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಒಟ್ಟಿಗೆ ಸೇರಿ ಮದ್ಯ ಸೇವಿಸಿದ್ದರು.

ಬಳಿಕ ಕುಡಿದ ಮತ್ತಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ವಲೇರಿಯನ್ ಮೆಂಡೋನ್ಸಾ, ಪ್ರವೀಣ್ ಮೆಂಡೋನ್ಸಾ ಕತ್ತಿಯಿಂದ ವನಜಾ ಪೂಜಾರಿ ಮೇಲೆ ಕಡಿದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.