ಬಂಟ್ವಾಳ: ಜಿಲ್ಲಾಧಿಕಾರಿಗಳು ಧಾರ್ಮಿಕ ಧ್ವಜವನ್ನು ಹಾಕಬಾರದು ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ರಮಾನಾಥ ರೈ ಸ್ಪಷ್ನೆ ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಉಡುಪಿ ಜಿಲ್ಲಾಧಿಕಾರಿಗಳು ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕೆ ಉಡುಪಿಯಲ್ಲಿ ಕೆಲವರಿಂದ ಟೀಕೆಗಳು ಬಂತು. ಅದರ ಮುಂದುವರಿದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಾಗಿದ್ದವರು ಕೇಸರಿ ಧ್ವಜವನ್ನು ಮತ್ತು ಇತರೆ ಯಾವುದೇ ಧರ್ಮದ ಧ್ವಜವನ್ನು ಹಾಕಬಾರದು ಎನ್ನುವ ಹೇಳಿಕೆ ಕೊಟ್ಟಿದ್ದೆ. ಆದರೆ ಅದು, ಮಾಧ್ಯಮದಲ್ಲಿ ನಾನು ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿದೆ ಎಂದು ಬಿಂಬಿಸಲಾಗಿದೆ. ನಾನು ಹೇಳಿರುವುದು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಇದೀಗ ಸ್ಪಷ್ಟನೆ ನೀಡಿದ್ದಾರೆ.

ʻಈಗ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ಅದರಲ್ಲೂ ಸರಕಾರಿ ನೌಕರರು, ಹಿರಿಯ ಅಧಿಕಾರಿಗಳು ಒಂದು ಧರ್ಮಕ್ಕೆ ಸೀಮಿತವಾದ ಬಾವುಟಗಳನ್ನು ಹಾಕಬಾರದು ಎನ್ನುವುದನ್ನ ಹೇಳಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬಾರದು ಎಂದು ರಮಾನಾಥ ರೈ ಮತ್ತೆ ಸ್ಪಷ್ಟನೆ ನೀಡಿದ್ದಾರೆ.


