ಬ್ರೇಕಿಂಗ್ ನ್ಯೂಸ್‌ನಿಂದ ಬ್ರೇಕ್ –‌ ಜ.25ರಂದು ಪತ್ರಕರ್ತರ ಕ್ರೀಡಾಕೂಟ

ಮಂಗಳೂರು: ದಿನವಿಡೀ ಬ್ರೇಕಿಂಗ್ ನ್ಯೂಸ್‌, ಅಪಘಾತ, ರಾಜಕೀಯ, ದುಃಖ–ದುಮ್ಮಾನಗಳ ನಡುವೆ ಓಡಾಡುವ ಪತ್ರಕರ್ತರ ಬದುಕಿಗೆ ವಿಶ್ರಾಂತಿ ಅಂದ್ರೆ ಬಹಳ ಅಪರೂಪ. ಆದರೆ, ಆ ಒತ್ತಡದ ಮಧ್ಯೆ ಒಂದಷ್ಟು ನಗು, ಓಟ, ಗೆಳೆಯರ ಜೊತೆಗಿನ ಕ್ಷಣಗಳು ಮನಸ್ಸಿಗೆ ಔಷಧಿ ಅನ್ನೋದನ್ನು ಮರೆತಿಲ್ಲ ಪತ್ರಕರ್ತರು.

ಅದಕ್ಕೇ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಜ.25ರಂದು ಬೆಳಗ್ಗೆ 9 ಗಂಟೆಗೆ ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ಈ ಕ್ರೀಡಾಕೂಟ ನಡೆಯಲಿದೆ.

ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹಾಗೂ ಕೆ.ಪಿ.ಟಿ. ಪ್ರಾಂಶುಪಾಲ ಹರೀಶ್ ಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸುದ್ದಿಗಳ ಮಧ್ಯೆ ಮುಗುಳ್ನಗು, ಕ್ಯಾಮೆರಾ– ಮೈಕ್‌, ನೋಟ್‌ಬುಕ್ ಬದಿಗಿಟ್ಟು ಮೈದಾನಕ್ಕಿಳಿಯುವ ‌ ಪತ್ರಕರ್ತರ ಈ ಕ್ರೀಡಾಕೂಟ ಸ್ನೇಹ, ಒಡನಾಟ ಮತ್ತು ಮಾನಸಿಕ ವಿಶ್ರಾಂತಿಗೆ ವೇದಿಕೆಯಾಗಲಿದೆ.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

error: Content is protected !!