ಹುಡುಗಿಯರ ಒಳ ಉಡುಪು ಕದಿಯುತ್ತಿದ್ದ ಸೈಕೋ ಬಂಧನ

ಬೆಂಗಳೂರು: ಹುಡುಗಿಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ ಬೆಂಗಳೂರು ಮೂಲದ ವಿಕೃತ ವ್ಯಕ್ತಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿಯ ಗಣೇಶ ದೇವಸ್ಥಾನದ ಬಳಿಯ ಸೋಮರಾಜ್ ಕಟ್ಟಡದ ನಿವಾಸಿ ಅಮಲ್ ಎನ್ ಅಲಿಯಾಸ್ ಅಜಿಕುಕುಮಾರ್ (23) ಬಂಧಿತ ಆರೋಪಿ.

ಜನವರಿ 19 ರಂದು ವಿದ್ಯಾ ನಗರದ ನಿವಾಸಿಗಳು ವ್ಯಕ್ತಿಯೊಬ್ಬ ಮನೆಯ ಮೇಲ್ಛಾವಣಿ ಮತ್ತು ಅಂಗಳದಲ್ಲಿ ಒಣಗಲು ಬಿಟ್ಟಿರುವ ಒಳ ಉಡುಪುಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಎಂದು ದೂರು ನೀಡಿದ್ದರು. ಸುಳಿವು ದೊರೆತ ತಕ್ಷಣ, ಹೊಯ್ಸಳ ಗಸ್ತು ತಂಡವು ಕಳ್ಳತನದ ಕೃತ್ಯದಲ್ಲಿದ್ದಾಗ ಆರೋಪಿಯನ್ನು ಬಂಧಿಸಿದೆ.

ನಂತರ ಆತನ ವಾಸಸ್ಥಾನಕ್ಕೆ ಹೋಗಿ ಶೋಧ ನಡೆಸಿದಾಗ ಮಹಿಳೆಯರ ಒಳ ಉಡುಪುಗಳ ಸಂಗ್ರಹ ಮತ್ತು ಆತ ಕದ್ದ ವಸ್ತುಗಳನ್ನು ಧರಿಸಿರುವ ಹಲವಾರು ಫೋಟೋಗಳು ಸಿಕ್ಕಿವೆ. ಆರೋಪಿ ಆರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಸ್ನೇಹಿತನ ಕೋಣೆಯಲ್ಲಿ ವಾಸಿಸುತ್ತಿದ್ದ. ಅವನಿಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ.

ಹಗಲು ಅವನು ಹೆಬ್ಬಗೋಡಿ ಪ್ರದೇಶದಲ್ಲಿ ಸುತ್ತಾಡುತ್ತಾ ಮನೆಗಳ ಹೊರಗೆ ನೇತುಹಾಕಿದ ಒಳ ಉಡುಪುಗಳನ್ನು, ಪೇಯಿಂಗ್ ಗೆಸ್ಟ್ ವಸತಿಗಳಿಗೆ ಹೋಗಿ ಕೂಡ ಕದಿಯುತ್ತಿದ್ದ. ಆ ಒಳ ಉಡುಪುಗಳನ್ನು ಧರಿಸಿ ಫೋಟೋಗೆ ಫೋಸ್ ಕೊಡುತ್ತಿದ್ದ. ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 303(2), 329(4), ಮತ್ತು 79 ರ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ.

error: Content is protected !!