ಅಶ್ಲೀಲ ವಿಡಿಯೋ ವೈರಲ್; ಡಿಜಿಪಿ ರಾಮಚಂದ್ರರಾವ್ ಅಮಾನತು!!

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣದ ಗಂಭೀರತೆಯನ್ನರಿತು ರಾಜ್ಯ ಸರ್ಕಾರ ಅಮಾನತು ಮಾಡಿ ಎಂದು ಆದೇಶ ನೀಡಿದೆ.

ರಾಮಚಂದ್ರರಾವ್ ನಾಗರೀಕ ಹಕ್ಕು ಜಾರಿ‌ ನಿರ್ದೇಶನಾಲಯದ(DCRE) ಮುಖ್ಯ ನಿರ್ದೇಶಕರಾಗಿ(DGP) ಕಾರ್ಯನಿರ್ವಹಿಸುತ್ತಿದ್ದರು. 1993 ಬ್ಯಾಚ್​​ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ರಾಮಚಂದ್ರರಾವ್, ಬೆಳಗಾವಿಯಲ್ಲಿ IGP ಆಗಿದ್ದ ವೇಳೆಯಲ್ಲಿನ ಅಶ್ಲೀಲ ವಿಡಿಯೋ ಇದೀಗ ವೈರಲ್ ಆಗಿದ್ದು, ಕಚೇರಿಯಲ್ಲಿ ಹಲವಾರು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ವಿಡಿಯೋ ವೈರಲ್ ಬೆನ್ನಲ್ಲೇ, ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳೋದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಅವರನ್ನು ಅಮಾನತು ಮಾಡಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ಜನವರಿ 24ಕ್ಕೆ ವಿಶೇಷ ಜಂಟಿ ಅಧಿವೇಶನವನ್ನು ಸರ್ಕಾರ ಕರೆದಿದೆ. ಅಧಿವೇಶನದಲ್ಲಿ ಡಿಜಿಪಿ ಪ್ರಕರಣವನ್ನು ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ವಿಪಕ್ಷಗಳ ಬಾಯಿಗೆ ಆಹಾರವಾಗದೇ ಇರಲು ಡಿಜಿಪಿ ಅಮಾನತು ಮಾಡಿದೆ ಎನ್ನಲಾಗುತ್ತಿದೆ.

error: Content is protected !!