ಬಿಗ್ ಬಾಸ್ ಗೆದ್ದ ಗಿಲ್ಲಿ, ರನ್ನರ್ ಅಪ್ ರಕ್ಷಿತಾಗೆ ಸಿಕ್ಕ ಬಹುಮಾನಗಳೇನು ಗೊತ್ತೇ?

Bigg Boss-12: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್ 12ರ ವಿಜೇತರಾಗಿ ಹಾಸ್ಯ ನಟ ಗಿಲ್ಲಿ ನಟರಾಜ ಹಾಗೂ ಮೊದಲ ರನ್ನರ್ ಅಪ್​ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ.

37 ಕೋಟಿಗೂ ಅಧಿಕ ವೋಟ್ ಪಡೆದ ಗಿಲ್ಲಿ ಅವರು ಬಿಗ್​ ಬಾಸ್ ಟ್ರೋಫಿ ಜತೆಗೆ 50 ಲಕ್ಷ ರೂ ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಎಸ್​ ಯುವಿ ವಿಕ್ಟೋರಿಯಸ್ ಕಾರನ್ನು ತಮ್ಮದಾಗಿಸಿಕೊಂಡರು. ಹಾಗೆಯೇ ಗಿಲ್ಲಿ ನಟನ ಆಟ ಮೆಚ್ಚಿದ ಕಿಚ್ಚ ಸುದೀಪ ಅವರೂ ಕೂಡ ವೈಯಕ್ತಿಕವಾಗಿ ಗಿಲ್ಲಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ವೇದಿಕೆಯಲ್ಲೇ ಘೋಷಿಸಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿಗೆ ಒಟ್ಟು 25 ಲಕ್ಷ ರೂ ನಗದು ಬಹುಮಾನ ಸಿಕ್ಕಿದೆ.

111 ದಿನಗಳ ಆಟದಲ್ಲಿ ಬಿಗ್ ಬಾಸ್​ ಮನೆಗೆ 24 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆದರೆ ಕೊನೆಯದಾಗಿ ಟಾಪ್‌ 6 ಕಂಟೆಸ್ಟಂಟ್‌ಗಳಾಗಿ ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು, ಅಶ್ವಿನಿ ಗೌಡ ಮತ್ತು ಧನುಷ್ ಫೈನಲ್‌ಗೆ ಬಂದಿದ್ದರು. ಈ ಪೈಕಿ ಧನುಷ್ 5ನೇ ರನ್ನರ್ ಅಪ್​ ಆಗಿದ್ದು, ಬಳಿಕ ಕಾವ್ಯ ಮತ್ತು ರಘು ಕ್ರಮವಾಗಿ 3 ಹಾಗೂ 4ನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಟಾಪ್​ 3ಯಲ್ಲಿ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿಗೌಡ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ವಿನಿಗೌಡ ಅವರು 2ನೇ ರನ್ನರ್ ಅಪ್​ ಆಗಿದ್ದು, ಮೊದಲನೇ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ.

ಹಾಸ್ಯ ಮಾಡುತ್ತಲೇ ಎಲ್ಲರ ಮನಗೆದ್ದ ಗಿಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಫಿನಾಲೆ ಹಿನ್ನೆಲೆಯಲ್ಲಿ ಸ್ಟುಡಿಯೋ ಬಳಿ ಗಿಲ್ಲಿ ಅಭಿಮಾನಿಗಳು ಆಗಮಿಸಿ, ಗೆಲುವನ್ನು ಸಂಭ್ರಮಿಸಿದ್ದಾರೆ.

error: Content is protected !!