
ಮಂಗಳೂರು: ಸುಬ್ರಹ್ಮಣ್ಯ ಸಮೀಪ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಮೃತರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನ ನಿವಾಸಿ ಅನುಗ್ರಹ ಎಂಟರ್ ಪ್ರೈಸಸ್ ಮಾಲಕ ಹರಿಪ್ರಸಾದ್ ನಾಯರ್ ಮಲ್ಲಾಜೆ(37) ಹಾಗೂ ಅವರ ಅಂಗಡಿಯಲ್ಲಿ ಕೆಲಸಕ್ಕಿದ್ದ ಸುಜಿತ್ ಕೊಲ್ಲಮೊಗ್ರು(26) ಎಂದು ಹೇಳಲಾಗಿದೆ. ಇವರಿಬ್ಬರೂ ಅವಿವಾಹಿತರಾಗಿದ್ದು ಸ್ನಾನಕ್ಕೆ ಕುಮಾರಧಾರಾ ನದಿಯ ಬಳಿ ಬಂದಿದ್ದಾರೆ. ಕುಲ್ಕುಂದ ಸಮೀಪ ನದಿಯಲ್ಲಿ ಸ್ನಾನಕ್ಕಿಳಿದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ನೆರವಿನಿಂದ ಇಬ್ಬರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.
