ಹೆಬ್ರಿಯ ಗೋಕಳ್ಳರು ಗಂಜಿಮಠದಲ್ಲಿ ಸೆರೆ

ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ರಿ ಪೊಲೀಸರು ಮಂಗಳೂರಿನ ಗಂಜಿಮಠ ಸಮೀಪದ ಮೂಡುಪೆರಾರದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಕೆಮ್ಮಣ್ಣು ನಿವಾಸಿ, ವಸೀಂ ಅಕ್ರಮ್ ಮತ್ತು ಮೊಹಮ್ಮದ್ ಖಾಜಾ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಮತ್ತು ಕಲಂ ಪ್ರಾಣಿ ಹಿಂಸಾ ಪ್ರತಿಬಂದಕ ಕಾಯ್ದೆ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: Content is protected !!