ಶಾಸಕ ಕಾಮತ್ ಅವರ ಶಾಸಕರ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಕೆ ಕಾರ್ಯಕ್ರಮದ ಗುದ್ದಲಿ ಪೂಜೆ

ಮಂಗಳೂರು: ಪವಿತ್ರ ಕಾರ್ಣಿಕ ಕ್ಷೇತ್ರ ಅತ್ತಾವರ ಅರಸು ಮುಂಡಂತಾಯ ದೈವಸ್ಥಾನದಲ್ಲಿ ಮಂಗಳೂರಿನ ನೆಚ್ಚಿನ ಶಾಸಕರಾದ ವೇದವ್ಯಾಸ ಕಾಮತ್ ಅವರ ಶಾಸಕರ ಅನುದಾನದಲ್ಲಿ 21 ಲಕ್ಷ ವೆಚ್ಚದಲ್ಲಿ ನೂತನವಾಗಿ ಇಂಟರ್ಲಾಕ್ ಅಳವಡಿಸುವ ಕಾರ್ಯಕ್ರಮದ ಗುದ್ದಲಿ ಪೂಜೆಯು ಇಂದು(ಜ.16) ದೈವಸ್ಥಾನದ ವಟಾರದಲ್ಲಿ ನಡೆಯಿತು.

ದೈವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾದ ವಿದ್ಯಾಧರ ಕೆ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ವೇದವ್ಯಾಸ್ ಕಾಮತ್, ಮಾಜಿ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ . ಮೋಹನ್ ಕುಮಾರ್ ,ಗೋಪಾಲಕೃಷ್ಣ ಭಟ್ ,ಅನಿಲ್ ಕುಮಾರ್, ಅಶ್ವಿತ್ ಅತ್ತಾವರ್ ನಾಗೇಶ್ ,ರಾಜಣ್ಣ ,ಶೇಷಣ್ಣ, ಮಂಜುನಾಥ, ಪ್ರದೀಪ್ ಭಂಡಾರ ಮನೆ ,ಹರ್ಷಿತ್ ಅತ್ತಾವರ್ ಪ್ರತಿಭಾ ಅತಾವರ ,ಸುಧಾಕರ್ ಕಾಮತ್, ಭಂಡಾರ ಮನೆಯವರು ಅತ್ತಾವರ ಊರಿನ ನಾಗರಿಕರು, ರಿಕ್ಷಾ ಮಾಲಕ ಹಾಗೂ ಚಾಲಕರು, ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಉಪಸ್ಥಿತರಿದ್ದರು.

ಡಾ.ಮಾಲತಿ ಶೆಟ್ಟಿ ಮಾಣೂರು ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ರಾವ್ ಕುಂಬಳೆ ವಂದಿಸಿದರು.

error: Content is protected !!