
ಸೂರತ್: ಬೈಕ್ನಲ್ಲಿ ಬರುವಾಗ ಗಾಳಿಪಟದ ದಾರವನ್ನು ತಪ್ಪಿಸಲು ಹೋಗಿ ವ್ಯಕ್ತಿಯೋರ್ವ ಪತ್ನಿ, ಮಗಳ ಸಮೇತವಾಗಿ ಒಂದೇ ಕುಟುಂಬದ ಮೂವರು ಸೇತುವೆಯಿಂದ ಕೆಳಗೆಬಿದ್ದು ಮೃತಪಟ್ಟಿರುವ ಘಟನೆ ಗುಜರಾತಿನ ಸೂರತ್ನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ರೆಹಾನ್ ರಹೀಮ್ ಶೇಖ್(35), ಪತ್ನಿ ರೆಹಾನಾ(33) ಮತ್ತು ಮಗಳು ಅಲಿಶಾ(10) ಮೃತಪಟ್ಟವರು ಎನ್ನಲಾಗಿದೆ.
ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಗಾಳಿಪಟದ ದಾರ ಇದ್ದಕ್ಕಿದ್ದಂತೆ ಅವರ ಎದುರು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಬೈಕ್ ಸೇತುವೆಯ ಮೇಲಿನ ವಿಭಜಕಕ್ಕೆ ಡಿಕ್ಕಿ ಹೊಡೆದು 70 ಅಡಿ ಕೆಳಗೆ ಬಿದ್ದಿದೆ. ರೆಹಾನ್ ರಹೀಮ್ ಶೇಖ್ ಮತ್ತು ಅವರ ಮಗಳು ಅಲಿಶಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಆದರೆ ಅವರ ಪತ್ನಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಅಪಘಾತದ ದೃಶ್ಯಗಳನ್ನು ಸೆರೆಹಿಡಿದುಕೊಳ್ಳಲಾಗಿದೆ. ಅಪಘಾತದ ಬಗ್ಗೆ ವರದಿಯಾದ ತಕ್ಷಣ, ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.