ಸುರತ್ಕಲ್‌ನಲ್ಲಿ ಜ.22ರಿಂದ ಹಿಂದು ಸಂಗಮ: ಏಳು ಸ್ಥಳಗಳಲ್ಲಿ ಕಾರ್ಯಕ್ರಮಗಳು

ಮಂಗಳೂರು: ಸುರತ್ಕಲ್ ನಗರದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ  ಜನವರಿ 22ರಿಂದ ಫೆಬ್ರವರಿ 8ರವರೆಗೆ ನಗರದ ಏಳು ಸ್ಥಳಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಮಿತಿ ಅಧ್ಯಕ್ಷ ಲಕ್ಷ್ಮಣ್ ಅಮೀನ್ ಕೋಡಿಕಲ್ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಗಳು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ, ಕಲಾ ಮತ್ತು ಸಹಕಾರಿ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿದ್ದು, ಸಮಾಜದಲ್ಲಿ ಸಾಮಾಜಿಕ ಸೇವೆ, ಸಹಕಾರ ಮತ್ತು ಸ್ವಾವಲಂಬನೆ ವೃದ್ಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮವು ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗೃತಿ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನ ಶೈಲಿ, ನಾಗರಿಕ ಕರ್ತವ್ಯ ಪಾಲನೆ ಮುಂತಾದ ಆದರ್ಶಗಳ ಅಡಿಯಲ್ಲಿ ನಡೆಯಲಿದೆ. ಅವರು ಸಾರ್ವಜನಿಕರನ್ನು ಮತ್ತು ಸ್ಥಳೀಯ ಸಮುದಾಯವನ್ನು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗಿ ನಡೆಸಲು  ಲಕ್ಷ್ಮಣ್ ಅಮೀನ್ ಕೋಡಿಕಲ್ ಮನವಿ ಮಾಡಿದರು.

ಮುಖ್ಯ ಕಾರ್ಯಕ್ರಮಗಳು ಮತ್ತು ಶೋಭಾಯಾತ್ರೆ ವಿವರ:

ದಿನಾಂಕ ಸ್ಥಳ ಸಮಯ ವಾರ್ಡ್ ಸಂಖ್ಯೆ ಶೋಭಾಯಾತ್ರೆ ಆರಂಭಸ್ಥಳ ಶೋಭಾಯಾತ್ರೆ ಕೊನೆ ಸ್ಥಳ
22-01-2026 ತಣ್ಣೀರುಬಾವಿ ದೋಸ್ತ್ ಕ್ಲಬ್ ಮೈದಾನ ಸಂಜೆ 5  ಪಣಂಬೂರು- 11 ಗಣೇಶ್ ಕಟ್ಟೆ ತಣ್ಣೀರುಬಾವಿ ದೋಸ್ತ್ ಕ್ಲಬ್ ಮೈದಾನ
25-01-2026 ಬಾಕಿಮಾರು ಗದ್ದೆ, ಹಳೆ ಮಾರಿಗುಡಿ ಸಂಜೆ 4  ಸದಾಶಿವ -1 ಸದಾಶಿವ ದೇವಸ್ಥಾನ ಮೈದಾನ ಹಳೆ ಮಾರಿಗುಡಿ ಬಾಕಿಮಾರು ಗದ್ದೆ
01-02-2026 ಬಂಟರ್ ಭವನ ಪಾರ್ಕಿಂಗ್ ಮೈದಾನ ಸಂಜೆ 4  ಅಗರಮೇಲು 2 ಮತ್ತು 6 ಕಾಂತೇರಿ ದೈವಸ್ಥಾನ ಬಂಟರ್ ಭವನ ಪಾರ್ಕಿಂಗ್ ಮೈದಾನ
01-02-2026 ಇಡ್ಯಾ ದೇವಸ್ಥಾನದ ಹಿಂಬದಿ ಸಂಜೆ 4  ನಾರಾಯಣಗುರು- 7 ಸುರತ್ಕಲ್ ಜಂಕ್ಷನ್ ಇಡ್ಯಾ ದೇವಸ್ಥಾನದ ಹಿಂಬದಿ
01-02-2026 ಕುಳಾಯಿ ಮಹಿಳಾ ಮಂಡಳಿ ಹಿಂಬದಿ ಸಂಜೆ 4 ಕುಳಾಯಿ- 9 ಚಿತ್ರಾಪುರ ದೇವಸ್ಥಾನ ಕುಳಾಯಿ ಮಹಿಳಾ ಮಂಡಳಿ ಹಿಂಬದಿ
01-02-2026 ಶ್ರೀ ರಾಮ ಮಂದಿರ ಬಳಿಯ ಮೈದಾನ ಸಂಜೆ 5  ಬೈಕಂಪಾಡಿ -10 ಕೂರಿಕಟ್ಟ ಅಯ್ಯಪ್ಪ ಮಂದಿರ ಶ್ರೀ ರಾಮ ಮಂದಿರ ಬಳಿಯ ಮೈದಾನ
08-02-2026 ಶ್ರೀ ಕೃಷ್ಣ ಭಜನಾ ಮಂದಿರ ಬಳಿಯ ಕಟ್ಟೆ ಸಂಜೆ 4 ಹೊಸಬೆಟ್ಟು- 8 ಗೋಪಾಲಕೃಷ್ಣ ಭಜನಾ ಮಂದಿರ ಶ್ರೀ ಕೃಷ್ಣ ಭಜನಾ ಮಂದಿರ ಬಳಿಯ ಸತ್ಯನಾರಾಯಣ ಕಟ್ಟೆ

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ  ಮಹಾಬಲ ಪೂಜಾರಿ ಮತ್ತು ಕೃಷ್ಣಶೆಟ್ಟಿ, ಉಪಾಧ್ಯಕ್ಷರು  ಸರೋಜ ಶೆಟ್ಟಿ ಮತ್ತು ಮೀನಾಕ್ಷಿ ದೇವಾಡಿಗ, ಮತ್ತು ಸಂಚಾಲಕ  ಮಿಥುನ್ ಶ್ರೀಯಾನ್ ಉಪಸ್ಥಿತರಿದ್ದರು.

error: Content is protected !!