ಮಕರ ಸಂಕ್ರಾಂತಿ ಎಂದರೆ ದಕ್ಷಿಣ ಭಾರತದವರಿಗೆ ಮೊದಲು ನೆನಪಾಗುವುದೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪುಣ್ಯ ಮಕರ ಜ್ಯೋತಿ🔥 ದರ್ಶನ. 48 ದಿನಗಳ ವೃತದ ಮಂಡಲ ಪೂರೈಸಿ ಶಬರಿಮಲೆ ಯಾತ್ರೆ ಮಾಡಿ ಅಯ್ಯಪ್ಪನ ದರ್ಶನ ಪಡೆದು ಪೊನ್ನಂಬಲ ಬೆಟ್ಟದಲ್ಲಿ ಗೋಚರಿಸುವ ಜ್ಯೋತಿ ನೋಡಿ ಪುನಿತರಾಗುವ ದಿನ. ಆದರೆ ಕೆಲವರ ಪ್ರಕಾರ ಬೆಟ್ಟದಲ್ಲಿ ಗೋಚರಿಸುವ ಜ್ಯೋತಿ ಸುಳ್ಳು ಅದು ಮೂಢನಂಬಿಕೆ ಅನ್ನುತ್ತಾರೆ. ಹಾಗಾದರೆ ಏನು ಈ ಜ್ಯೋತಿ? ಅದು ಪವಾಡನಾ ಅಥವಾ ಮಾನವ ನಿರ್ಮಿತನಾ ಅಂತ ಹುಡುಕಿದಾಗ ಮಕರ ಜ್ಯೋತಿಯ ಇತಿಹಾಸ ಸಿಗುತ್ತದೆ.

ಇತಿಹಾಸ:
ಅಯ್ಯಪ್ಪ ಮಹಿಷಿ ಸಂಹಾರಕ್ಕಾಗಿಯೇ ಜನ್ಮವೆತ್ತ ಹರಿಹರ ಅಂಶ ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ, ಆದರೆ ಮಕರ ಜ್ಯೋತಿಗೂ ಅಯ್ಯಪ್ಪನಿಗೂ ಏನು ಸಂಬಂಧ ಎಂದು ಹುಡುಕಿದಾಗ, ಮಣಿಕಂಠನ ಸಾಕು ತಾಯಿ ಅಂದರೆ ಆಗಿನ ಪಂದಳರಾಜ ರಾಜಶೇಖನ ಹೆಂಡತಿ ಅಯ್ಯಪ್ಪನಿಗೆ, “ನಮಗೆ(ತಾಯಿ, ಹೆಣ್ಣುಮಕ್ಕಳಿಗೆ) ನಿನ್ನ ದರ್ಶನ ಭಾಗ್ಯವಿಲ್ಲವೇ?” ಎಂದು ಕೆಳಿದಾಗ ಅಯ್ಯಪ್ಪ “ಪ್ರತಿ ಮಕರ ಸಂಕ್ರಾಂತಿಯಂದು ಉತ್ತರಾ ನಕ್ಷತ್ರ🌟 ರೂಪದಲ್ಲಿ ನಾನು ನಿಮಗೆಲ್ಲರಿಗೂ ಹಾಗೂ ಜಗತ್ತಿಗೆ ದರ್ಶನ ನೀಡುತ್ತೇನೆ” ಎಂದು ಮಾತು ನೀಡುತ್ತಾರೆ ಹಾಗೂ “ಅದುವೇ ಮಕರಜ್ಯೋತಿ” ಎಂದು ಹೇಳುತ್ತಾರೆ.
ಅಯ್ಯಪ್ಪನ ಮಾತಿನ ಪ್ರಕಾರ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ತಿರುವಾಭಾರಣ ಬಂದು ಅಯ್ಯಪ್ಪ ಪೂಜಾ ಆಗುವ ಸಮಯದಲ್ಲಿ ಅಂದರೆ ಸಂಜೆ 6 ರಿಂದ 7:30 ರ ತನಕ ಶಬರಿಮಲೆಯ ಉತ್ತರ ದಿಕ್ಕಿನಲ್ಲಿ ಪೊನ್ನಂಬಲ ಬೆಟ್ಟದ ಮೇಲೆ ಆಗಸದಲ್ಲಿ ಉತ್ತರಾ ನಕ್ಷತ್ರ ಕಾಣುತ್ತದೆ ಅದುವೇ ಅಯ್ಯಪ್ಪ ಸ್ವರೂಪಿ ಮಕರಜ್ಯೋತಿ. ಈ ನಕ್ಷತ್ರ🌟 ಕೇವಲ ಮಕರಸಂಕ್ರಮಣದ ದಿನದಂದೇ ಕಾಣುತ್ತದೆ. ಆ ಉತ್ತರಾ ನಕ್ಷತ್ರವೇ ಮಕರಜ್ಯೋತಿ.

ಪೊನ್ನಂಬಲ ಬೆಟ್ಟದಲ್ಲಿ ಅಯ್ಯಪ್ಪನ ಪೂಜಾ ಸಮಯದಲ್ಲೇ ಅದು ಗೋಚರಿಸುವುದು ಯಾಕೆ?
ಮಕರ ವಿಳಕ್ಕೂ (ಮಕರ ಬೆಳಕು) ಅಂದರೆ ಮಕರ ಬೆಳಕು ಮಕರ ಸಂಕ್ರಮಣದ ದಿನ ಪೊನ್ನಂಬಲ ಬೆಟ್ಟದ ಮೇಲೆ ಅಯ್ಯಪ್ಪನ ಮಕರ ಸಂಕ್ರಮಣದ ದಿನ ಪೂಜಾ ಸಮಯದಲ್ಲಿ 3 ಬಾರಿ ಗೋಚರಿಸುವ ದೈವೀ ಸ್ವರೂಪಿ ಬೆಳಕು ಇದು. ಇದೇನು ಅಂತ ಹುಡುಕಿದಾಗ ಇದು ಅಯ್ಯಪ್ಪನಿಗೆ ಅರ್ಪಿಸುವ ಕರ್ಪುರ ಕಾಷ್ಠ. 800 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನ ಶಬರಿಮಲೆ ಅಯ್ಯಪ್ಪನ ದೇವಾಲಯ ಸ್ಥಾಪನೆಯಾದಾಗ ಪೊನ್ನಂಬಲಬೆಟ್ಟದ ಮೇಲೆ ಆಗಸದಲ್ಲಿ ಅಯ್ಯಪ್ಪ ಮಕರ ಜ್ಯೋತಿ ಅಂದರೆ ಉತ್ತರಾ ನಕ್ಷತ್ರವಾಗಿ🌟 ದರ್ಶನ ನೀಡಿದಾಗ ಅಲ್ಲಿನ ಗಿರಿಜನರು(ಬೆಟ್ಟದ ಕಾಡಿನ ಜನರು) ಸಂಭ್ರಮಾಚರಣೆ ಮಾಡಿದ್ದರಂತೆ.
ಅದೇ ಸಮಯದಲ್ಲಿ ಆ ನಕ್ಷತ್ರಕ್ಕೆ ಮಂಗಳಾರತಿ ರೂಪದಲ್ಲಿ ದೇವರ್ಶಿ ನಾರದರು ಪ್ರಥಮವಾಗಿ ಮಕರ ವಿಳಕ್ಕೂ🔥 ಬೆಳಗಿಸಿದ್ದರಂತೆ. ಎರಡನೇ ವಿಳಕ್ಕನ್ನೂ ದೇವರಾಜ ಇಂದ್ರ ಹಾಗೂ ಮೂರನೇ ವಿಳಕ್ಕೂ (ಬೆಳಕು, ದೀಪ) ವನ್ನು ಮಹರ್ಷಿ ಗುರು ಪರಶುರಾಮರು ಬೆಳಗಿಸಿದ್ದರಂತೆ ಇದೇ ಸಂಪ್ರದಾಯವನ್ನು ಮುಂದೆ ಅಲ್ಲಿನ ಗಿರಿಜನರು ಮುಂದುವರೆಸಿಕೊಂಡು ಹೋದರಂತೆ. ಅವರು ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಅಯ್ಯಪ್ಪನ ಪೂಜಾ ಸಮಯದಲ್ಲಿ ಸಂಧ್ಯಾಕಾಲ ಕಾಲ ಕಾಣುವ ಉತ್ತರಾ ನಕ್ಷತ್ರಕ್ಕೆ🌟 ಕರ್ಪೂರ ಕಾಷ್ಠ ಮೂರು ಬಾರಿ ಅರ್ಪಿಸುತ್ತಿದ್ದರಂತೆ.
ಇದಕ್ಕೆ ಮತ್ತೊಂದು ಅರ್ಥ ಕೂಡಾ ಇದೆ.. ಮಾಲೆ ಹಾಕಿದ ಸ್ವಾಮಿಗಳ ಮನೆಯವರು ಕುಟುಂಬದ ಮಹಿಳೆಯರು ಹೆಣ್ಣುಮಕ್ಕಳಿಗೆ ಅಯ್ಯಪ್ಪನ ಪೂಜೆ ನೋಡಲು ಸಿಗುದಿಲ್ಲ. ಆದರೆ ಅವರು ಈ ಮಕರ ವಿಳಕ್ಕನ್ನೇ ನೋಡಿ ಅಯ್ಯಪ್ಪನ ಆರತಿ ಎಂದು ಸಂಭ್ರಮಿಸುತ್ತಿದ್ದರಂತೆ.
ಆ ಕಾಡಿನ ಗಿರಿಜನರು ಮೂರು ಬಾರಿ ಬೆಳಗಿಸುವ ಈ ಮಕರ ವಿಳಕ್ಕೂ ಸಂಪ್ರದಾಯವನ್ನು ಮುಂದುವರೆಸಲು ಕಾರಣವೇನೆಂದರೆ.. ಮಹಿಶಿ ಈ ಗಿರಿಜನರನ್ನು ಜೀತದಾಳಾಗಿ ಮಾಡಿಕೊಂಡಿತ್ತಂತೆ. ಅವರ ಕೆಲ ಕುಟುಂಬವನ್ನು ಕೂಡ ನಾಶ ಮಾಡಿತ್ತಂತೆ. ಅದೇ ಮಹಿಷಿಯ ಸಂಹಾರ ಅಯ್ಯಪ್ಪ ಮಾಡಿದ್ದರಿಂದ ಗೌರವ ರೂಪವಾಗಿ ಅವರು ಅಯ್ಯಪ್ಪನಿಗೆ ಕರ್ಪೂರ ಕಾಷ್ಠ ಅರ್ಪಿಸುತ್ತಿದ್ದರಂತೆ. ಮುಂದೆ ದಿನೇ ದಿನೇ ಹೋದಂತೆ ಈ ಗಿರಿಜನರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಕೆಲ ವರ್ಷ ಆ ಬೆಟ್ಟದಲ್ಲಿ ಜ್ಯೋತಿ ಕಾಣುವುದು ನಿಂತಿತ್ತು.

ತದನಂತರ ಅದೇ ಸಂಪ್ರದಾಯವನ್ನು ಅಲ್ಲಿರುವ ಕೆಲ ಗಿರಿಜನರು ಹಾಗೂ ಶಬರಿಮಲಾ ಅಯ್ಯಪ್ಪ ದೇವಾಲಯಕ್ಕೆ ಸಬಂಧಪಟ್ಟವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಶಬರಿಮಲೆ ಅಯ್ಯಪ್ಪ ದೇವಾಲಯ ಆಗಲಿ ಪಂದಳ ರಾಜಮನೆತನವಾಗಲಿ ಬೆಟ್ಟದಲ್ಲಿ ಕಾಣುದೆ ʻಜ್ಯೋತಿʼ ಎಂದು ಎಲ್ಲೂ ಹೇಳಿಲ್ಲ. ಅವರು ಕೇರಳ ಕೋರ್ಟಿನಲ್ಲಿ ಕೂಡ ಜ್ಯೋತಿ ಎಂದರೆ ಮಲೆಯ ಉತ್ತರ ದಿಕ್ಕಿನಲ್ಲಿರುವ ಪೊನ್ನಂಬಲ ಬೆಟ್ಟದ ಮೇಲೆ ಆಗಸದಲ್ಲಿ ಕಾಣುವ ಉತ್ತರಾ ನಕ್ಷತ್ರವೇ ಮಕರಜ್ಯೋತಿ ಎಂದು ಹೆಳಿದ್ದರು. ಹಾಗೂ ಬೆಟ್ಟದಲ್ಲಿ ಗೋಚರಿಸುವ ಬೆಳಕು ಅದು ಆ ನಕ್ಷತ್ರಕ್ಕೆ ಗೌರವ ಸೂಚಿಸುವ ಕರ್ಪೂರದ ಕಾಷ್ಠ ಎಂದು ಹೇಳಿದ್ದರು.
ಇಲ್ಲಿ ಎಲ್ಲೂ ಮೂಢನಂಬಿಕೆ ಇಲ್ಲ. ಅದು ದೇವರಿಗೆ ಗೌರವ ಸೂಚಕ ಬೆಳಕು. ಹಾಗೆ ಮಕರ ಜ್ಯೋತಿ ಸತ್ಯ. ಮಕರ ಸಂಕ್ರಮಣದ ದಿನದಂದೇ ಕಾಣುವ ಉತ್ತರಾ ನಕ್ಷತ್ರ🌟 ಶಬರಿಮಲೆ ದೇವಾಲಯ ಈ ಹಿಂದೆ ಎಲ್ಲೂ ಮಕರ ವಿಳಕ್ಕನ್ನೇ ಮಕರಜ್ಯೋತಿ ಅಂದಿಲ್ಲ. ಇದು ಹಬ್ಬಿಸಿದ್ದು ಅಂದಿನ ಕಾಲಕ್ಕೆ ಹೋದ ಹೊರ ರಾಜ್ಯದ ಮಾಲಾಧಾರಿಗಳು. ಬೆಟ್ಟದಲ್ಲೇ ಕಾಣುವುದೆ ಜ್ಯೋತಿ ಎಂದು ತಿಳಿದು ಹಬ್ಬಿಸಿದ್ದರು. ಹಾಗೆ ಅಂದಿನ ಚಾನೆಲ್ ಗಳು ಕೂಡ ಬೆಟ್ಟದಲ್ಲಿ ಕಾಣುವುದೆ ಜ್ಯೋತಿ ಅಂದಿದ್ದರು. ಇದರಿಂದ ಜನ ಬೆಟ್ಟದಲ್ಲಿ ಕಾಣುವ ಮಕರ ವಿಳಕ್ಕನ್ನೇ ಮಕರ ಜ್ಯೋತಿ ಅಂದುಕೊಂಡಿದ್ದರು.
ಆದರೆ ಅಯ್ಯಪ್ಪನ ಲೀಲೆ ಅಪಾರ ವರ್ಷ ವರ್ಷ ಅಯ್ಯಪ್ಪನ ಭಕ್ತರು ಹೆಚ್ಚುತ್ತಾ ಹೋಗುತ್ತಿದ್ದಾರೆ. ಮಕರ ಸಂಕ್ರಾಂತಿಯಂದೇ ಕಾಣುವ ಉತ್ತರಾ ನಕ್ಷತ್ರ🌟ವೇ ಮಕರಜ್ಯೋತಿ.