ಬಸಪ್ಪ ಬಡಿಗೇರ…
ಇವರ ಹೆಸರು ಲಕ್ಕುಂಡಿ ಜನರಿಗೆ ಚಿರಪರಿಚಿತ… ಇವರು ವಿಜ್ಞಾನಿಯೂ ಅಲ್ಲ, ಸಂಶೋಧಕನೂ ಅಲ್ಲ. ಇತಿಹಾಸದ ಬಗ್ಗೆ ಇರುವ ಕುತೂಹಲಿಗ ಅಷ್ಟೆ. ಆದರೆ ಇವರು ಮಾಡುತ್ತಿರುವ ಕಾರ್ಯಗಳು ಯಾವ ಇತಿಹಾಸಕಾರ, ವಿಜ್ಞಾನಿಗಿಂತಲೂ ಕಡಿಮೆ ಏನಲ್ಲ…

ಲಕ್ಕುಂಡಿ ಎನ್ನುವುವು ಸಾಮಾನ್ಯ ನಗರವಲ್ಲ. ಗದಗ ಜಿಲ್ಲೆನಲ್ಲಿ ಇರುವ ಒಂದು ಐತಿಹಾಸಿಕ ಗ್ರಾಮ ಮತ್ತು ಪ್ರಾಚೀನ ಧಾರ್ಮಿಕ–ಸಾಂಸ್ಕೃತಿಕ ಕೇಂದ್ರ. ಇಲ್ಲಿ ಪ್ರಾಚೀನ ಕಾಲದಿಂದ ಚಾಲುಕ್ಯ ಕಾಲದ ಶಿಲ್ಪಕಲೆ, ದೇವಾಲಯಗಳು ಮತ್ತು ಹಳೆಯ ಶಾಸನಗಳು ಕಂಡುಬರುತ್ತವೆ. ಇಲ್ಲಿ ಕಂಡುಬಂದ ಪುರಾತನ ವಸ್ತುಗಳು ಹಾಗೂ ಚಿನ್ನ–ಬಂಗಾರ ಸಂಗ್ರಹಗಳು, ಇಂದಿನ ಶಾಸನಗಳು, ಮೂರ್ತಿಗಳು, ದೇವಾಲಯದ ಅವಶೇಷಗಳು ಚರಿತ್ರೆಯನ್ನು ಹೇಳುತ್ತವೆ. ಇತ್ತೀಚೆಗಷ್ಟೇ ಒಂದು ಕುಟುಂಬಿಕರು ಮನೆಯ ಪಾಯ ತೋಡುತ್ತಿದ್ದಾಗ ಕೆಜಿಗಟ್ಟಲೆ ಚಿನ್ನದ ನಿಧಿ ಸಿಕ್ಕಿತ್ತು.

ಇಂತಹಾ ಐತಿಹಾಸಿಕ ಊರಿನಲ್ಲಿ ಬಸಪ್ಪ ಬಡಿಗೇರ ಐತಿಹಾಸಿಕ ಶೋಧನೆಗಿಳಿದಿದ್ದು, ಇಂದು ಅವರಿಗೆ ಸಿಕ್ಕ ನಿಧಿಗಳನ್ನು ಕಂಡು ಅವರು ತನ್ನ ಕಣ್ಣನ್ನೇ ನಂಬಲಿಲ್ಲ. ಅಚಾನಕ್ ಆಗಿ ಕಂಡು ಬಂದ ವಸ್ತುಗಳನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದರು. ಯಾಕೆಂದರೆ ಈ ವಸ್ತುಗಳು ಸಾಮಾನ್ಯವಾಗಿರಲಿಲ್ಲ, ಅವುಗಳಲ್ಲಿ ಹವಳ, ನೀಲಮಣಿ, ಮುತ್ತು, ಸ್ಫಟಿಕ, ಬಿಳಿ ಹವಳ ಮತ್ತು ಕರಿಪುಕ್ಕಾ ಸೇರಿದಂತೆ ಪುರಾತನ ಕಾಲಕ್ಕೆ ಸೇರಿದ್ದ ವಸ್ತುಗಳ ಭಂಡಾರವೇ ಅವರಿಗೆ ಸಿಕ್ಕಿದೆ. ಬಸಪ್ಪ ಬಡಿಗೇರರು ನಿಶ್ಶಬ್ದವಾಗಿ ವಸ್ತುಗಳನ್ನು ಪರಿಶೀಲಿಸುತ್ತ, ಅವುಗಳ ಹಳೆಯ ಕಾಲದ ಕಥೆ ಮತ್ತು ರಹಸ್ಯಗಳ ಹಿಂದೆ ಬಿದ್ದಿದ್ದಾರೆ.

ಅವರು ಕಳೆದ 45 ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ ಮತ್ತು ಈ ಹಿಂದೆ ಹಲವಾರು ಪುರಾತನ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಈ ಹೊಸ ಪತ್ತೆ ಲಕ್ಕುಂಡಿಯ ಹಳೆಯ ರಹಸ್ಯಗಳನ್ನು ಮತ್ತೆ ಜೀವಂತಗೊಳಿಸಿದೆ. ಸ್ಥಳೀಯರು ಈ ಪತ್ತೆಯ ಬಗ್ಗೆ ಕುತೂಹಲದಿಂದ ಕೇಳುತ್ತಿದ್ದು, ಬಸಪ್ಪ ಬಡಿಗೇರನ ಶೋಧ ಮತ್ತು ಪತ್ತೆ ಕಥೆ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದೆ.