ಕಾರು ಪಲ್ಟಿಯಾಗಿ ಇಬ್ಬರು ಸಜೀವ ದಹನ!

ಕಾರವಾರ: ಕಾರು ಸಹಿತ ಇಬ್ಬರು ಸಜೀವ ದಹನವಾದ ಘಟನೆ ಹೊನ್ನಾವರ ಗೇರುಸೊಪ್ಪ ಬಳಿ ಇಂದು(ಜ.7) ಬೆಳಿಗ್ಗೆ ಬೆಳಕಿಗೆ ಬಂದಿದೆ.

ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಕಾರ್ ನಂಬರ್ ಪ್ಲೇಟ್ ಸಹ ಸುಟ್ಟು ಹೋಗಿರುವುದರಿಂದ ಅದರಲ್ಲಿದ್ದವರು ಯಾರು? ಎಲ್ಲಿಯ ಕಾರು? ಎಂದು ಗುರುತಿಸುವುದು ಕಷ್ಟಕರವಾಗಿದೆ.

ಹೊನ್ನಾವರ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದಾರೆ.

error: Content is protected !!