ಲವ್ ಜಿಹಾದ್ ಮಾದರಿಯ ಹೊಸ ಮತಾಂತರ ಪಿತೂರಿ: ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್- ಮುಸ್ಲಿಂ ಸಹೋದರಿಯರು ಸೆರೆ

ಭೋಪಾಲ್: ಉದ್ಯೋಗದ ಆಮಿಷವೊಡ್ಡಿ ಬಡ ಹೆಣ್ಣುಮಕ್ಕಳನ್ನು ಲೈಂಗಿಕ ದಂಧೆಗೆ ತಳ್ಳುವುದಲ್ಲದೆ, ಅವರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದ ಭೀಕರ ಜಾಲವೊಂದು ಭೋಪಾಲ್‌ನಲ್ಲಿ ಬಯಲಾಗಿದೆ. ಅಮ್ರೀನ್ ಮತ್ತು ಅಫ್ರೀನ್ ಎಂಬ ಕಿಲಾಡಿ ಸಹೋದರಿಯರು ತಮ್ಮ ಸಹಚರ ಚಂದನ್ ಯಾದವ್ ಜೊತೆಗೂಡಿ ನಡೆಸುತ್ತಿದ್ದ ಈ ‘ಧಾರ್ಮಿಕ ಮತಾಂತರ’ದ ಕೃತ್ಯ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ.

ಈ ಪ್ರಕರಣದಲ್ಲಿ ಕೇವಲ ಲೈಂಗಿಕ ಶೋಷಣೆ ಮಾತ್ರ ನಡೆದಿಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾದ ಮತಾಂತರದ ಅಜೆಂಡಾ ಅಡಗಿದೆ ಎಂಬುದು ಎಫ್‌ಐಆರ್‌ನಿಂದ ಸ್ಪಷ್ಟವಾಗಿದೆ. ಬಂಧಿತ ಆರೋಪಿ ಚಂದನ್ ಯಾದವ್ ಸಂತ್ರಸ್ತ ಮಹಿಳೆಯೊಬ್ಬರಿಗೆ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಲ್ಲದೆ, ಆಕೆಯನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. “ನೀನು ಮತಾಂತರಗೊಂಡರೆ ನಿನಗೆ ಉತ್ತಮ ಮುಸ್ಲಿಂ ಕುಟುಂಬದಲ್ಲಿ ಮದುವೆ ಏರ್ಪಡಿಸುತ್ತೇವೆ” ಎಂದು ಆಮಿಷವೊಡ್ಡಿ, ಆಕೆಯ ಭಯವನ್ನೇ ಬಂಡವಾಳ ಮಾಡಿಕೊಂಡು ಬಲವಂತವಾಗಿ ಧರ್ಮ ಬದಲಿಸುವಂತೆ ಮಾಡಿದ್ದಾನೆ. ಇದು ಕೇವಲ ವೈಯಕ್ತಿಕ ಘಟನೆಯಲ್ಲ, ಬದಲಿಗೆ ಬಡತನದಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಬೃಹತ್ ಸಂಚು ಎಂಬ ಸಂಶಯಕ್ಕೆ ಪುಷ್ಟಿ ನೀಡಿದೆ.

ಮಾದಕ ದ್ರವ್ಯ ಮತ್ತು ಅತ್ಯಾಚಾರದ ಆಟ:
ಸಹೋದರಿಯರಾದ ಅಮ್ರೀನ್ ಮತ್ತು ಅಫ್ರೀನ್ ಬಡತನದಲ್ಲಿರುವ ಹೆಣ್ಣುಮಕ್ಕಳಿಗೆ ಹತ್ತು ಸಾವಿರ ರೂಪಾಯಿ ಸಂಬಳದ ಕೆಲಸದ ಆಮಿಷವೊಡ್ಡಿ ತಮ್ಮ ಐಷಾರಾಮಿ ವಿಲ್ಲಾಗೆ ಕರೆಸಿಕೊಳ್ಳುತ್ತಿದ್ದರು. ಅಲ್ಲಿ ಅವರಿಗೆ ಬಲವಂತವಾಗಿ ಮದ್ಯ ಹಾಗೂ ‌ʻಎಮ್‌ಡಿ’ (MD) ಎಂಬ ಭೀಕರ ಮಾದಕ ದ್ರವ್ಯಗಳನ್ನು ನೀಡಲಾಗುತ್ತಿತ್ತು. ಸಂತ್ರಸ್ತೆಯರು ಪ್ರಜ್ಞೆ ತಪ್ಪಿದಾಗ ಅವರ ಮೇಲೆ ಅತ್ಯಾಚಾರ ಎಸಗಲಾಗುತ್ತಿತ್ತು. ಚತ್ತೀಸ್‌ಗಢದ ಒಬ್ಬ ಬ್ಯೂಟಿಷಿಯನ್ ಮಹಿಳೆಯನ್ನು ಕೆಲಸದ ನೆಪದಲ್ಲಿ ಅಹಮದಾಬಾದ್‌ಗೆ ಕರೆದೊಯ್ದು, ಅಲ್ಲಿ ಆರೋಪಿಗಳಾದ ಯಾಸಿರ್, ಬಿಲಾಲ್ ಮತ್ತು ಚಾನು ಎಂಬುವವರು ಸರಣಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಪೊಲೀಸರು ವಶಪಡಿಸಿಕೊಂಡ ಆರೋಪಿಗಳ ಮೊಬೈಲ್ ಫೋನ್‌ನಲ್ಲಿ ನೂರಾರು ಅನುಮಾನಾಸ್ಪದ ವಾಟ್ಸಾಪ್ ಗ್ರೂಪ್‌ಗಳು ಪತ್ತೆಯಾಗಿವೆ. ಈ ಗ್ರೂಪ್‌ಗಳಲ್ಲಿ ಹತ್ತಾರು ಹೆಣ್ಣುಮಕ್ಕಳ ಭಾವಚಿತ್ರಗಳಿದ್ದು, ಇಡೀ ದಂಧೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದು ಸಾಬೀತಾಗಿದೆ. ಸ್ಲಮ್‌ನಲ್ಲಿ ವಾಸವಿದ್ದ ಈ ಸಹೋದರಿಯರು ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಿಲ್ಲಾದಲ್ಲಿ ವಾಸಿಸುತ್ತಿರುವುದು, ಈ ಮತಾಂತರ ಮತ್ತು ಲೈಂಗಿಕ ದಂಧೆಯ ಹಿಂದೆ ಎಷ್ಟು ದೊಡ್ಡ ಮಟ್ಟದ ಹಣದ ವಹಿವಾಟು ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸದ್ಯ ಅಮ್ರೀನ್, ಅಫ್ರೀನ್ ಮತ್ತು ಚಂದನ್ ಯಾದವ್ ಪೊಲೀಸರ ವಶದಲ್ಲಿದ್ದು, ತಲೆಮರೆಸಿಕೊಂಡಿರುವ ಬಿಲಾಲ್, ಚಾನು ಮತ್ತು ಯಾಸಿರ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

error: Content is protected !!