ಹಿದಾಯತ್ತುಲ್ ಇಸ್ಲಾಂ ವೆಲ್ಪೇರ್ ಕಮಿಟಿ ಸಹಯೋಗದ 46ನೇ ವಾರ್ಷಿಕೋತ್ಸವ; ರಾಜ್ಯೋತ್ಸವ ಪ್ರಶಸ್ತಿ ವಿಜೇತ ಝಕರಿಯಾ ಜೋಕಟ್ಟೆಗೆ ಸನ್ಮಾನ

ಬಂಟ್ವಾಳ : ಹಿದಾಯತ್ತುಲ್ ಇಸ್ಲಾಂ ವೆಲ್ಪೇರ್ ಎಜ್ಯುಕೇಶನ್ ಕಮಿಟಿ(ರಿ) ಹಾಗೂ ಮದೀನಾ ಜುಮಾ ಮಸೀದಿ ಕಲಾಯಿ ಇದರ ಸಹಯೋಗದೊಂದಿಗೆ 46 ನೇ ವರ್ಷದ ಧಾರ್ಮಿಕ ಮತ ಪ್ರವಚನ ಹಾಗೂ ವಿದ್ಯಾರ್ಥಿಗಳ ಖವಾಲಿ ಹಾಡು ಹಾಗೂ ಮೇಷಪ್ ಹಾಡು ಸ್ಪರ್ಧೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯ ಜೋಕಟ್ಟೆ ಅವರಿಗೆ ಸನ್ಮಾನ ಕಾರ್ಯಕ್ರಮ ಹಿದಾಯತ್ತುಲ್ ಇಸ್ಲಾಂ ವೆಲ್ಪೇರ್ ಎಜ್ಯುಕೇಶನ್ ಕಮಿಟಿಯ ಅಧ್ಯಕ್ಷರಾದ ಸಿದ್ದೀಕ್ ಶೇಖ್ ಇವರ ಅಧ್ಯಕ್ಷತೆಯಲ್ಲಿ ಖೈಬರ್ ನಗರ ಕಲಾಯಿಯಲ್ಲಿ ಇತ್ತೀಚಿಗೆ ನಡೆಯಿತು.

ಮದೀನಾ ಜುಮಾ ಮಸೀದಿ ಕಲಾಯಿ ಮುದರ್ರಿಸ್ ಅಬ್ದುಲ್ ಖಾದರ್ ಫೈಝಿ ಜಾವಗಲ್ ಉದ್ಘಾಟಿಸಿ, ಖತೀಬರಾದ ಅಬ್ದುಲ್ ಲತೀಫ್ ಫೈಝಿ ಪ್ರಾಸ್ತಾವಿಕ ಮಾತಾನ್ನಾಡಿದರು.

ವೇದಿಕೆಯಲ್ಲಿ ಎಂಜೆಎಂ ಇದರ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಎಮ್.ಎಸ್., ಅಧ್ಯಕ್ಷರಾದ ಹಬೀಬ್ ಎಮ್.ಎಸ್., ಮುಹಮ್ಮದ್ ಇರ್ಫಾನ್, ಝುಬೈರ್ ಫೈಝಿ, ಝಿರಾರ್ ಫೈಝಿ, ಶಾಹಿದ್ ಫೈಝಿ, ಮುಹಮ್ಮದ್ ಸಫಾನ್, G.C.C.ಕಮಿಟಿ ಕಲಾಯಿ ಅಧ್ಯಕ್ಷರು ಆದಂ ಯಳಂದೂರು, ಸಾದಿಕ್ ಶೇಖ್ ,ಅಬ್ದುಲ್ ಹಕೀಮ್ ಎಮ್.ಟಿ. ಉಪಸ್ಥಿತರಿದ್ದರು.

ಹಿದಾಯತುಲ್ಲ್ ಇಸ್ಲಾಂ ವೆಲ್ಪೇರ್ ಎಜ್ಯುಕೇಶನ್ ಕಮಿಟಿ ಕಲಾಯಿ ಇದರ ಪ್ರಧಾನ ಕಾರ್ಯದರ್ಶಿ ನೌಶಾದ್ ಗರಡಿ ಸ್ವಾಗತಿಸಿ, ಮದೀನಾ ಜುಮಾ ಮಸೀದಿ ಕಲಾಯಿ ಇದರ ಪ್ರಧಾನ ಕಾರ್ಯದರ್ಶಿಯಾದ ನಿಶಾರ್ ಯು.ಕೆ. ಧನ್ಯವಾದಗೈದರು

error: Content is protected !!