ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ನಡೆಸಲಾಗುತ್ತಿರುವ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರ ಮೊಹಮ್ಮದ್ ಕೈಫ್‌ಗೆ ಕೇಂದ್ರ ಚುನಾವಣಾ ಆಯೋಗವು ಸೋಮವಾರ ಸಮನ್ಸ್ ಜಾರಿ ಮಾಡಿದೆ.

ಮೊಹಮ್ಮದ್ ಶಮಿ ಭರ್ತಿ ಮಾಡಿರುವ SIR ಫಾರ್ಮ್‌ನಲ್ಲಿ ಕೆಲ ವ್ಯತ್ಯಾಸಗಳಿದ್ದು, ಇಷ್ಟೇ ಅಲ್ಲ ದಾಖಲೆಗಳು, ಮಾಹಿತಿಗಳು ತಾಳೆಯಾಗುತ್ತಿಲ್ಲ. ಹಾಗಾಗಿ ಮೊಹಮ್ಮದ್ ಶಮಿಗೆ ಚುನಾವಣಾ ಆಯೋಗ ನೀಡಿದ ಸಮನ್ಸ್‌ನಲ್ಲಿ ಜನವರಿ 5ರೊಳಗೆ ಚುನಾವಣಾ ಆಯೋಗ ಕಚೇರಿಗೆ ಹಾಜರಾಗಲು ಸೂಚಿಸಿತ್ತು. ಆದರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗಿಯಾಗಿರುವ ಕಾರಣ ಶಮಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ವಿಚಾರಣೆಯನ್ನು ಜ.9ರಿಂದ 11ರೊಳಗೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

