ಪಾಂಗಾಳ : ಬಸ್ಸೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ 66ರಲ್ಲಿ ಇಂದು(ಜ.5) ಮದ್ಯಾಹ್ನ ಸಂಭವಿಸಿದೆ.

ಮೂಳೂರು ನಿವಾಸಿ ಕೃಷ್ಣರಾಜ್ ಮೃತ ವ್ಯಕ್ತಿ.
ಕೃಷ್ಣರಾಜ್ ಮೂಲತ: ಮೂಳೂರಿನವರಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪಾಂಗಾಳದ ಅಪಾಯಕಾರಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಉಡುಪಿಯಿಂದ ಕಾಪು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದಿದೆ. ಬಸ್ಸು ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಾಯಾಳುವನ್ನು ಮೂಳೂರಿನ ಎಸ್ ಡಿಪಿಐ ಆಂಬುಲೆನ್ಸ್ ಮೂಲಕ ಸಮಾಜ ಸೇವಕ ಜಲಾಲುದ್ದೀನ್ ಮತ್ತು ಹಮೀದ್ ರವರು ಉಡುಪಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ