ಸೈಫುದ್ದೀನ್ ಹತ್ಯೆ ಪ್ರಕರಣ: ಕೊಲೆಗೆ ಸಂಚು ಹೂಡಿ ವಿದೇಶಕ್ಕೆ ಹಾರಿದ ಅಕ್ರಂಗೆ ಲುಕ್‌ಔಟ್‌ ನೊಟೀಸ್!

ಉಡುಪಿ: ಉಡುಪಿಯ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆಗೆ ಸಂಚು ರೂಪಿಸಿರುವುದು ಈತನ ಪರಮಾಪ್ತನಾಗಿದ್ದ ಅಕ್ರಂ ಎನ್ನುವುದು ಬಯಲಾಗಿದ್ದು, ಈತನ ಬಂಧನಕ್ಕೆ ಉಡುಪಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಸೆಪ್ಟೆಂಬರ್ 27ರಂದು ಸೈಫುದ್ದೀನ್ ಕೊಲೆ ನಡೆಯುವ ಮುಂಚೆಯೇ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಅದಕ್ಕಿಂತ ಮುಂಚೆಯೇ ಈತ ಕೊಲೆಗೆ ಸಂಚು ರೂಪಿಸಿ, ಸುಪಾರಿ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ.

ಬಸ್ ಮಾಲಕನನ್ನೇ ಮುಗಿಸಿದ ಡ್ರೈವರ್‌ಗಳು!! ಕಾರಣ ಏನು!? ಹಿಂದೆಯೂ ನಡೆದಿತ್ತು ಹತ್ಯೆಗೆ ಸ್ಕೆಚ್

ಪೊಲೀಸ್ ದಾಖಲೆಗಳ ಪ್ರಕಾರ, 2016ರ ಜುಲೈ 14ರಂದು ಆತ್ರಾಡಿ ಸಮೀಪದ ಶೇಡಿಗುಡ್ಡೆ ಪ್ರದೇಶದಲ್ಲಿ ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣದಲ್ಲಿಯೂ ಸೈಫುದ್ದೀನ್ ಹಾಗೂ ಅಕ್ರಂ ಇಬ್ಬರೂ ಆರೋಪಿಗಳಾಗಿದ್ದರು. ಆನಂತರ ಇಬ್ಬರೂ ವ್ಯವಹಾರದಲ್ಲಿ ಸಹಭಾಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅಕ್ರಂ ಲಾಭದ ವ್ಯವಹಾರವನ್ನು ತನ್ನ ಪಾಲಿಗೆ ಮಾಡಿಕೊಂಡು ಸೈಫುದ್ದೀನ್ ಹಾಗೂ ಪತ್ನಿ ಹೆಸರಿಗೆ ದಾಖಲಿಸಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮನಃಸ್ತಾಪ ಉಂಟಾಗಿತ್ತು. ಇದಲ್ಲದೆ, ಸೈಫುದ್ದೀನ್ ಅಕ್ರಂ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

“ರಿಧಾ ನಿನಗಾಗಿ ಕಾಯುತ್ತಿದ್ದಾಳೆ…!” ಹೆಂಡತಿಯ ಮೂಲಕ ಬಲೆಗೆ ಬೀಳಿಸಿ ಎಕೆಎಂಎಸ್‌ ಮಾಲಕನ ಕೊಲೆ!

ಸೈಫುದ್ದೀನ್‌ನಿಂದ ತನಗೆ ಜೀವಭಯ ಇರುವುದನ್ನು ಗ್ರಹಿಸಿದ ಅಕ್ರಂ, ಸೈಫ್‌ನ ಸಹಚರರಿಗೆ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿ ಆತನ ಕೊಲೆ ನಡೆಯುವ ಒಂದು ವಾರದ ಮುಂಚೆಯೇ ವಿದೇಶಕ್ಕೆ ಹಾರಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅಕ್ರಂ ಬಂಧನಕ್ಕೆ ಪೊಲೀಸರು ಲುಕೌಟ್‌ ನೋಟೀಸ್‌ ಜಾರಿಗೊಳಿಸಿದ್ದಾರೆ.

ಉಡುಪಿ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ: ಐದನೇ ಆರೋಪಿ ಬಂಧನ

error: Content is protected !!