ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಮೂರನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 4 ವಿಕೆಟ್‌ಗಳ ಪಡೆದು ಇದು ಎಲೀಟ್ ‘ಎ’ ಗುಂಪಿನಲ್ಲಿ ಕರ್ನಾಟಕಕ್ಕೆ ಸತತ ಮೂರನೇ ಭರ್ಜರಿ ಜಯ ಗಳಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರುಗಳಲ್ಲಿ 289 ರನ್‌ಗಳಿಗೆ ಆಲೌಟ್ ಆಗಿದ್ದು, ವೇಗದ ಬೌಲರ್ ಅಭಿಲಾಷ್ ಶೆಟ್ಟಿ 4 ವಿಕೆಟ್ ಪಡೆದಿದ್ದಾರೆ.
ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಅರ್ಧ ಶತಕ (58, 77ಎ, 4×7) ಗಳಿಸಿ 27ನೇ ಓವರಿನಲ್ಲಿ ಮಧ್ಯಮ ವೇಗಿ ಸನ್ನಿ ಸಂಧು ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಜಗದೀಶನ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದಾಗ ತಮಿಳುನಾಡು ಮೇಲುಗೈ ಸಾಧಿಸುವಂತೆ ಕಂಡಿತ್ತು. ಆದರೆ ಶ್ರೀಜಿತ್ (77, 78ಎ) ಮತ್ತು ಶ್ರೇಯಸ್ ಗೋಪಾಲ್ (55, 47ಎ) ಅವರು ಐದನೇ ವಿಕೆಟ್‌ಗೆ ಅಮೂಲ್ಯ 116 ರನ್ ಸೇರಿಸಿ ಕರ್ನಾಟಕದ ಮೇಲುಗೈಗೆ ಕಾರಣರಾಗಿದ್ದಾರೆ.
ಈ ಟೂರ್ನಿಯಲ್ಲಿ ಕರ್ನಾಟಕ ತಂಡದ 3ನೇ ಜಯವಾಗಿದ್ದು, ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲೂ ಕರ್ನಾಟಕ ಜಯಭೇರಿ ಬಾರಿಸಿತ್ತು.