ಬೆಂಗಳೂರು: ಕನ್ನಡ ಮತ್ತು ತಮಿಳು ಧಾರಾವಾಹಿಗಳ ಜನಪ್ರಿಯ ನಟಿ ನಂದಿನಿ ಸಿಎಂ ಬೆಂಗಳೂರಿನ ಆರ್ಆರ್ ನಗರದಲ್ಲಿ ಆತ್ಮಹ*ತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಕನ್ನಡ ಹಾಗೂ ತಮಿಳಿನ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಂದಿನಿ ನಟಿಸಿದ್ದರು. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಹಾಗೆಯೇ ತಮಿಳಿನ ಜನಪ್ರಿಯ ಧಾರಾವಾಹಿ ʼಗೌರಿ’ಯಲ್ಲಿ ನಂದಿನಿ ಅವರು ನಾಯಕಿಯ ಪಾತ್ರವನ್ನು ಮಾಡಿದ್ದರು. ಅವರು ಹಲವಾರು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ʼದುರ್ಗಾʼ ಮತ್ತು ʼಕನಕʼ ಪಾತ್ರಗಳ ಮೂಲಕ ನಂದಿನಿ ಇನ್ನಷ್ಟು ವೀಕ್ಷಕರ ಮನಗೆದಿದ್ದರು.


ನಂದಿನಿ ಅವರು ಮೂಲತಃ ಕೊಟ್ಟೂರಿನವರು ಎನ್ನಲಾಗಿದ್ದು, ಬೆಂಗಳೂರಿನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ತಾಯಿಗೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.


ನಂದಿನಿ ಅವರ ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.