ತಿರುವನಂತಪುರ: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಮತ್ತೆ ಲಂಕಾ ವಿರುದ್ದದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸ್ಮೃತಿ ಮಂಧನಾ ಉತ್ತಮ ಇನ್ನಿಂಗ್ಸ್ ಆಡಿ ತಿರುವನಂತಪುರದಲ್ಲಿ ಸದ್ದು ಮಾಡಿದೆ.

ಸ್ಮೃತಿ ಮಂಧನಾ ಎದುರಿಸಿದ 48 ಎಸೆತದಲ್ಲಿ 80 ರನ್ ಬಾರಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು ಮೂರು ಸಿಕ್ಸರ್ ಮತ್ತು 11 ಬೌಂಡರಿ ಹೊಡೆದಿದ್ದಾರೆ. ಶಫಾಲಿ ಮತ್ತು ಸ್ಮೃತಿ ಮೊದಲ ವಿಕೆಟ್ ಗೆ 162 ರನ್ ಜೊತೆಯಾಟ ಆಡಿದರು.
ಗೆಲುವಿನ ಬಳಿಕ ಸ್ಮೃತಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಮಹಿಳಾ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1700 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು.
ಮಹಿಳಾ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹಿಂದಿನ ದಾಖಲೆಯೂ ಮಂಧನಾ ಹೆಸರಿನಲ್ಲಿತ್ತು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಕಳೆದ ವರ್ಷ ಎಲ್ಲಾ ಮಾದರಿಗಳಲ್ಲಿ 35 ಪಂದ್ಯಗಳಲ್ಲಿ ಒಟ್ಟು 1659 ರನ್ ಗಳಿಸಿದ್ದರು. 2025 ರ ಕ್ಯಾಲೆಂಡರ್ ವರ್ಷದಲ್ಲಿ, ಅವರು ಇಲ್ಲಿಯವರೆಗೆ ಆಡಿದ 32 ಪಂದ್ಯಗಳಲ್ಲಿ 1703 ರನ್ ಗಳಿಸಿ ಈ ದಾಖಲೆ ಮುರಿದರು.