“ನನ್ನ ದೇಹ ಚರ್ಚೆಯ ವಿಷಯವಲ್ಲ, ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ”: ಟ್ರೋಲ್‌ಗಳಿಗೆ ಸಾನ್ವಿ ಸುದೀಪ್‌ ತಿರುಗೇಟು

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ಸ್‌ ಹೆಸರಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್‌ಗಳ ವಾರ್‌ ನಡೆಯುತ್ತಿದೆ. ಇದೀಗ ಸುದೀಪ್‌ ಅವರ ಮಗಳು ಸಾನ್ವಿ ವಿರುದ್ಧವೂ ಕೆಲವರು ಅಸಭ್ಯ ರೀತಿಯಲ್ಲಿ ಕಮೆಂಟ್‌ ಮಾಡಿದ್ದರು.


ಕಳೆದ ಕೆಲ ದಿನಗಳ ಹಿಂದಷ್ಟೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಕೆಲವರು ನಿಂದನೀಯ ಕಮೆಂಟ್‌ಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಈ ಘಟನೆಯೂ ನಡೆದಿದ್ದು, ಈ ಬಗ್ಗೆ ಸುದೀಪ್‌ ಅವರು, ʼಕೆಟ್ಟದಾಗಿ ಕಮೆಂಟ್‌ ಮಾಡುವವರು ವೇಸ್ಟ್‌ ನನ್ನ ಮಕ್ಕಳುʼ ಎಂದು ಹೇಳಿದ್ದರು.

ಇದೀಗ ಸುದೀಪ್‌ ಪುತ್ರಿಯೂ ಟ್ರೋಲ್‌ ಮಾಡುವವರ ವಿರುದ್ಧ ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕುವ ಮೂಲಕ, “ನನ್ನ ದೇಹವು ಚರ್ಚೆಯ ವಿಷಯವಲ್ಲ; ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ” ಎಂದು ತಿರುಗೇಟು ಕೊಟ್ಟಿದ್ದಾರೆ.

error: Content is protected !!