ಬ್ಯಾಡ್ಮಿಂಟನ್‌ ವಿಶ್ವ ಫೆಡರೇಶನ್‌ ಆಯೋಗದ ಅಧ್ಯಕ್ಷೆಯಾಗಿ ಪಿ.ವಿ. ಸಿಂಧು ನೇಮಕ

ನವದೆಹಲಿ: ಬ್ಯಾಡ್ಮಿಂಟನ್‌ ವಿಶ್ವ ಫೆಡರೇಶನ್‌ ಕ್ರೀಡಾಪಟುಗಳ ಆಯೋಗದ ನೂತನ ಅಧ್ಯಕ್ಷೆಯಾಗಿ ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ನೇಮಕಗೊಂಡಿದ್ದು, ಇವರು ಇಂಡೋನೇಷ್ಯಾದ ಗ್ರೇಸಿಯಾ ಪೊಲಿನಾ ಸ್ಥಾನವನ್ನು ತುಂಬಲಿದ್ದಾರೆ.

2029ರ ತನಕ ಸಿಂಧು ಈ ಸ್ಥಾನದಲ್ಲಿ ಮುಂದುವರಿಯಲಿದ್ದು, ಇದರೊಂದಿಗೆ ಬಿಬ್ಲ್ಯುಎಫ್‌ ಸಮಿತಿಯ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.

ಬಿಬ್ಲ್ಯೂಎಫ್‌ ಕ್ರೀಡಾಪಟುಗಳ ಆಯೋಗವು ವಿಶ್ವದ ಬ್ಯಾಡ್ಮಿಂಟನ್‌ ಆಟಗಾರರಿಗಾಗಿ ಇರುವ ಒಂದು ಸಂಘಟನೆಯಾಗಿದ್ದು, ಇದರ ಅಧ್ಯಕ್ಷೆಯಾಗಿ ಸಿಂಧು ಕ್ರೀಡಾಪಟುಗಳನ್ನು ಪ್ರತಿನಿಧಿಸಲಿದ್ದಾರೆ. ಅವರ ಸಮಸ್ಯೆಗಳಿದ್ದರೆ ಅದನ್ನು ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿ ಪರಿಹಾರ ಕೊಡಿಸಲು ಪ್ರಯತ್ನಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಧು, ಪ್ರತಿಯೊಬ್ಬ ಆಟಗಾರನನ್ನು ಪ್ರತಿನಿಧಿಸಲು, ಅರ್ಥಪೂರ್ಣ ಮತ್ತು ಶಾಶ್ವತ ಬದಲಾವಣೆಗಾಗಿ ಹೋರಾಡಲು ಬಿಡಬ್ಲ್ಯೂಎಫ್‌ನ ಜೊತೆಗಿರಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

error: Content is protected !!