ಮಂಗಳೂರು: ಕೊಂಚಾಡಿ, ಕೊಪ್ಪಲಕಾಡು ಪ್ರದೇಶದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬಳ ಕತ್ತಿನಲ್ಲಿ ಇದ್ದ ಸುಮಾರು ಮೂರುವರೆ ಪವನ್ ತೂಕದ ಚಿನ್ನದ ಸರವನ್ನು ಕಳ್ಳನು ಎಗರಿಸಿ ಪರಾರಿಯಾದ ಘಟನೆ ದಾಖಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಮಹಿಳೆಯ ಬೊಬ್ಬೆ ಕೇಳಿದಂತೆ ಅಕ್ಕಪಕ್ಕದ ನಿವಾಸಿಗಳು ಓಡಿ ಬಂದಿದ್ದು, ಕಳ್ಳನು ಸಮೀಪದ ಮನೆಯ ಕಂಪೌಂಡ್ ಹಾರಿ ಪರಾರಿಯಾದನು. ಬಳಿಕ ಆತ ಬೇರೆ ಕಡೆ ಹೋಗಿ ಬಟ್ಟೆ ಬದಲಾಯಿಸಿಕೊಂಡು, ಅನುಮಾನ ಮೂಡದಂತೆ ತೆರಳಿದ್ದಾನೆ.
ಘಟನೆಯ ದೃಶ್ಯಗಳು ಸಮೀಪದ ಮನೆಯ ಸಿಸಿ ಕ್ಯಾಮರಾ ಮೂಲಕ ದಾಖಲಾಗಿದ್ದು, ಸರ ಕಳೆದುಕೊಂಡ ಮಹಿಳೆಯು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕಳ್ಳನನ್ನು ಶೀಘ್ರದಲ್ಲೇ ಬಂಧಿಸಲು ಕ್ರಮ ಕೈಗೊಂಡಿದ್ದಾರೆ.
