ಕಂಕನಾಡಿ-ಪಂಪ್‌ವೆಲ್ ರಸ್ತೆಯ ಚರಂಡಿಯಲ್ಲಿ ಮೃತದೇಹ ಪತ್ತೆ!

ಮಂಗಳೂರು: ನಗರದ ಕಂಕನಾಡಿ-ಪಂಪ್ವೆಲ್ ಹಳೆಯ ರಸ್ತೆಯಲ್ಲಿನ ಚರಂಡಿಯೊಂದರಲ್ಲಿ ಗದಗ ಜಿಲ್ಲೆಯ ಕಾರ್ಮಿಕನ ಮೃತದೇಹ ಸೋಮವಾರ(ಡಿ.22) ಸಂಜೆ ಪತ್ತೆಯಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲೆಯ ಪಡಿಯಪ್ಪ ಮೃತ ವ್ಯಕ್ತಿ.

ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಪಡಿಯಪ್ಪ ಶನಿವಾರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟ ನಂತರ ನಾಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರ ಮನೆಮಂದಿ, ಕುಟುಂಬದ ಇತರ ಸದಸ್ಯರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಸೋಮವಾರ ಸಂಜೆಯ ವೇಳೆಗೆ ಚರಂಡಿಯಲ್ಲಿ ಪಡಿಯಪ್ಪರ ಮೃತದೇಹ ಪತ್ತೆಯಾಗಿದೆ.

ಮೃತದೇಹದ ಮೇಲೆ ಗಾಯಗಳು ಕಂಡುಬಂದಿರುವುದರಿಂದ, ಕುಟುಂಬದ ಸದಸ್ಯರು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!