ಭಜನೆ ಕ್ಷೇತ್ರದ ಸಾಧಕ ಶ್ರೀಧರ ಪಂಜ ಇವರಿಗೆ ಸನ್ಮಾನ

ಪಕ್ಷಿಕೆರೆ: ಇಲ್ಲಿನ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಭಜನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಧರ್ ಪಂಜ ಇವರಿಗೆ ವಾರ್ಷಿಕ ಭಜನಾ ಮಂಗಳೋತ್ಸವದ ಸಂದರ್ಭದಲ್ಲಿ ಸನ್ಮಾನ ನಡೆಯಿತು.

ಪಂಜ ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕರಾದ ಸುರೇಶ್ ಭಟ್ ಪಂಜ, ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ಸತೀಶ್ ಶೆಟ್ಟಿ ಪಂಜದಗುತ್ತು, ರಘುರಾಮ್ ಶೆಟ್ಟಿ, ಚಂದ್ರಹಾಸ ಎಂ. ಶೆಟ್ಟಿ, ಸೀತಾರಾಮ್ ಅಮೀನ್, ಮುಂಬೈ ಸಮಿತಿಯ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ರಮೇಶ್ ಶೆಟ್ಟಿ, ಬಾಕಿಮಾರು ಗುತ್ತು ಸೀತಾರಾಮ್ ಶೆಟ್ಟಿ ಪಂಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯ ಕೇಶವ ಪೂಜಾರಿ, ಪದ್ಮನಾಭ ಪೂಜಾರಿ, ನವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕುಣಿತ ಭಜನಾ ಸಂಘಟಕಿ, ವೈಟ್ ಲಿಫ್ಟಿಂಗ್ ನಲ್ಲಿ ಪ್ರಶಸ್ತಿ ಪಡೆದ ಪ್ರಿಯಾ ಪೂಜಾರಿ ಉಳ್ಯ ಹಾಗೂ ಯಕ್ಷಗುರು ರಕ್ಷಿತ್ ಪಡ್ರೆ ಇವರ ತಾಯಿ ಗೀತಾ ರತ್ನಾಕರ ಶೆಟ್ಟಿ ಇವರಿಗೆ ಸನ್ಮಾನ ನಡೆಯಿತು.

ಪ್ರಮೋದ್ ಶೆಟ್ಟಿ ಸನ್ಮಾನ ಪತ್ರ ಓದಿದರು. ಸತೀಶ್ ಶೆಟ್ಟಿ ಬೈಲಗುತ್ತು ನಿರೂಪಣೆ ಮಾಡಿದರು.

ಬಳಿಕ ನೃತ್ಯ ಶ್ರೀ ವಿಠೋಬ ಯಕ್ಷ ನೂಪುರ ನಾಟ್ಯ ಕಲಾ ಕೇಂದ್ರ ಮಕ್ಕಳಿಂದ ರಂಗಪ್ರವೇಶ ಹಾಗೂ “ಶ್ರೀರಾಮ ಕಾರುಣ್ಯ” ಯಕ್ಷಗಾನ ಪ್ರದರ್ಶನ ನಡೆಯಿತು.

error: Content is protected !!