ಸುಳ್ಯ: ಎಂಜಿನ್ ವೈಫಲ್ಯದಿಂದ ರಸ್ತೆಯಲ್ಲೇ ಬಾಕಿ ಆಗಿದ್ದ ಬೃಹತ್ ಟ್ರಕ್ ಅನ್ನು ಬದಿಗೆ ಸರಿಸುವ ವೇಳೆ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಘಟನೆ ಬೆಳ್ಳಾರೆಯ ನಿಂತಿಕಲ್ಲು ರಸ್ತೆಯ ಪಂಜಿಗಾರು ಪೆಟ್ರೋಲ್ ಬಂಕ್ ಬಳಿ ರವಿವಾರ(ಡಿ 21) ನಡೆದಿದೆ.

ಲಾರಿಯನ್ನು ಹಲವು ಮಂದಿ ಸೇರಿ ಹಿಂದಕ್ಕೆ ತಳ್ಳಿದಾಗ ಮಣ್ಣಿನ ರಸ್ತೆಯಲ್ಲಿ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದು, ರಿಕ್ಷಾ ಜಖಂಗೊಂಡಿದೆ.