ನವದೆಹಲಿ: ಹೊಸ ವರ್ಷಕ್ಕೆ ಮೊಬೈಲ್ ಬಳಕೆದಾರರಿಗೆ ಕಹಿ ಸುದ್ದಿ ಎಂಬಂತೆ ಭಾರತೀಯ ಟೆಲಿಕಾಂ ಕಂಪನಿಗಳು 2026ರಲ್ಲಿ 4ಜಿ ಮತ್ತು 5ಜಿ ರೀಚಾರ್ಜ್ ಪ್ಲ್ಯಾನ್ ಗಳ ದರವನ್ನು ಶೇ.16ರಿಂದ 20ರಷ್ಟು ಏರಿಕೆ ಮಾಡಲಿದೆ ಎಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ವರದಿ ಮಾಡಿದೆ.

ವರದಿ ಪ್ರಕಾರ, ಭಾರತದ ಮಧ್ಯಮ ವರ್ಗದ ಜನರು ಈಗಾಗಲೇ ಪ್ರತೀ ತಿಂಗಳು ತಮ್ಮ ಮೊಬೈಲ್ ಇಂಟರ್ನೆಟ್ ಗಾಗಿ ನೂರಾರು ರೂಪಾಯಿ ಪಾವತಿಸುತ್ತಿದ್ದಾರೆ. ಇದೀಗ 2026 ಭಾರತದ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಆರ್ಥಿಕ ಬರೆ ಬೀಳಲಿದೆ. ಹಾಗೆಯೇ ಉತ್ತಮ ಡೇಟಾ ಬೆಲೆ ನಿಗದಿ, ಪೋಸ್ಟ್ ಪೇಯ್ಡ್ ಬಳಕೆದಾರರ ಸಂಖ್ಯೆ ಮತ್ತು ಹೆಚ್ಚಿನ ರೋಮಿಂಗ್ ಬೇಡಿಕೆಯಿಂದಾಗಿ ಏರ್‌ಟೆಲ್‌ನ ARPU-FY26 ರಲ್ಲಿ 260 ರೂ.ಗಳಿಂದ FY28 ರ ವೇಳೆಗೆ 320ಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಿದೆ.