ಮಂಗಳೂರು: ದುಬೈ ಮಾರ್ಕೆಟ್ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ “ದುಬೈ ಮಾರ್ಕೆಟ್ ಪ್ರೀಮಿಯರ್ ಲೀಗ್-2025” ಇದರ ಉದ್ಘಾಟನೆ ಮಂಗಳವಾರ ಮುಂಜಾನೆ ನಗರದ ಉರ್ವಾ ಕ್ರಿಕೆಟ್ ಗ್ರೌಂಡ್ ನಲ್ಲಿ ಜರುಗಿತು.


ಇಂಟಕ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಡ್ವೋಕೇಟ್ ಕರೀಷ್ಮಾ ಶೇಖ್ ಪಂದ್ಯಾಟವನ್ನು ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಸಿ ಶುಭಕೋರಿದರು. ಬಳಿಕ ಮಾತಾಡಿದ ಅವರು, “ಕ್ರೀಡಾಕೂಟಗಳು ಯುವಜನರ ಮನಸ್ಸನ್ನು ಬೆಸೆಯುವ ಕೆಲಸ ಮಾಡಬೇಕು. ಸೋಲು ಗೆಲುವು ಪ್ರತೀ ಕ್ರೀಡೆಯಲ್ಲಿ ಇದ್ದದ್ದೇ. ಕ್ರೀಡಾ ಸ್ಫೂರ್ತಿಯಿಂದ ಯುವಕರು ಇಂತಹ ಪಂದ್ಯಾಟಗಳಲ್ಲಿ ತೊಡಗಿಕೊಳ್ಳಬೇಕು” ಎಂದರು.